ನೇಸರಗಿ. ಇಲ್ಲಿನ ಪ್ರಸಿದ್ದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವವು ಬುಧವಾರದಂದು ಸಂಜೆ 4 ಘಂಟೆಗೆ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ 8 ಕ್ಕೆ ಅಭಿಷೇಕ, ಮಹಾಪೂಜೆ,15 ಜನರ ಉಚಿತ ರವಿ ಗುಗ್ಗುಳೋತ್ಸವ, ನೇಸರಗಿ ಕಲ್ಲೋಳಿ ಸದ್ಭಕ್ತರಿಂದ ಒಡಪು, ವೀರಾಗಾಶೇ, ಮಜಲು, ದೈವ ಕುಣಿತ, ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟು ಪ್ಯಾಟಿ ಓಣಿ, ಕರ್ನಾಟಕ ಚೌಕ ಮೂಲಕ ಗ್ರಾಮದೇವತೆಯರ ಗುಡಿ ಪ್ರವೇಶಿಸಿ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿಂದ ಮಹಾ ಪ್ರಸಾದ,ಸಂಜೆ 3-30 ರಿಂದ 6-30 ರ ವರೆಗೂ ಗೋಕಾಕ ರಸ್ತೆಯವರೆಗೂ ರಥ ಚಲಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸಿ ಅದ್ದೂರಿ ರಥೋತ್ಸವ ನೆರವೇರಿತು.
ಈ ಜಾತ್ರಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಿ ಭಾವದಿಂದ ಪಾಲ್ಗೊಂಡಿದ್ದರು.