ಶ್ರೀ ಎಸ್ ಆರ್ ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ಫಲಿತಾಂಶ ನೂರರಷ್ಟು

Ravi Talawar
ಶ್ರೀ ಎಸ್ ಆರ್ ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ಫಲಿತಾಂಶ ನೂರರಷ್ಟು
WhatsApp Group Join Now
Telegram Group Join Now

ಹಳ್ಳೂರ,ಏಪ್ರಿಲ್ 11:  ಗ್ರಾಮದ ಶ್ರೀ ಎಸ್ ಆರ್ ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಒಂದರ ಫಲಿತಾಂಶ ಪ್ರಕಟವಾಗಿದ್ದು, ಇದು ಕಲಾ ಮತ್ತು ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಸಾಧಿಸಿದೆ.

ಈ ಕಾಲೇಜಿನ ಕುಮಾರಿ .ಭಾಗ್ಯಶ್ರೀ ನಿಂಗಪ್ಪ ಸಾಯನ್ನವರ-  586(97.66) ಪ್ರಥಮ, ಕುಮಾರಿ. ರಾಧಿಕಾ ಶಂಕರ ಮೇತ್ರಿ -579(96.5) ದ್ವಿತೀಯ, ಕುಮಾರಿ.ಸ್ವಾತಿ ಕೆಂಪಣ್ಣ ಕಲ್ಲಾರ-578(96.33) ತೃತೀಯ, ಕುಮಾರಿ ಲಕ್ಷ್ಮಿ  ಕಲ್ಲೋಳೆಪ್ಪ ದಡ್ಡಿಮನಿ -574(95.33) ಚತುರ್ಥ ಸ್ಥಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

 

ಈ ಎಲ್ಲಾ ವಿದ್ಯಾರ್ಥಿನಿಯರನ್ನು ಕಾಲೇಜಿನ ಭೂಧಾನಿಗಳು, ಕಾಲೇಜು ಸುಧಾರಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಊರಿನ ಸಮಸ್ತ ಗ್ರಾಮಸ್ಥರು ಮತ್ತು ಶಿಕ್ಷಣ ಪ್ರೇಮಿಗಳು ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕ ಬಂಧುಗಳು ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article