ಮುರನಾಳದಲ್ಲಿ ಶ್ರೀ ಗ್ರಾಮದೇವಿ ಊಡಿ ತುಂಬುವ ಕಾರ್ಯಕ್ರಮ: ಲೋಕವೆಲ್ಲಾ ಸಮೃದ್ಧಿಯಾಗಲಿ ಗ್ರಾಮಸ್ಥರಿಂದ ಪ್ರಾರ್ಥನೆ

Ravi Talawar
ಮುರನಾಳದಲ್ಲಿ ಶ್ರೀ ಗ್ರಾಮದೇವಿ ಊಡಿ ತುಂಬುವ ಕಾರ್ಯಕ್ರಮ: ಲೋಕವೆಲ್ಲಾ ಸಮೃದ್ಧಿಯಾಗಲಿ ಗ್ರಾಮಸ್ಥರಿಂದ ಪ್ರಾರ್ಥನೆ
WhatsApp Group Join Now
Telegram Group Join Now

ಬಾಗಲಕೋಟೆ,22: ತಾಲೂಕಿ ಹೋಸ ಮುರನಾಳದಲ್ಲಿ ಶ್ರೀಗ್ರಾಮದೇವಿ ಕಡವಾರದ ನಿಮಿತ್ಯ ಊಡಿ ತುಂಬುವ ಕಾರ್ಯ ಅದ್ದೂರಿಯಾಗಿ ಜರುಗಿತು, ಊಡಿ ತುಂಬಿದ ಗ್ರಾಮದ ಹಿರಿಯರು,  ರೋಗ ರುಜಿಣಗಳು ಗ್ರಾಮದಲ್ಲಿ ಬರದಿರಲಿ,ಮಳೆ ಬೆಳೆ ಚೆನ್ನಾಗಿ ಬಂದು ಲೋಕವೆಲ್ಲಾ ಸಮೃದ್ಧಿಯಾಗಲಿ ಗ್ರಾಮಸ್ಥರು
ಪ್ರಾರ್ಥಿಸಿದರು.

ಗ್ರಾಮದಲ್ಲಿ ಮಳೆ ಬೆಳೆಗಾಗಿ ವಾರದ ವೃತ ಹಿಡಿಯಲಾಗಿತ್ತು ಮಂಗಳವಾರ ಕೋನೆಯ ಐದನೇ ವಾರ ಆಗಿದ್ದರಿಂದ ಚಿಕ್ಕಮಕ್ಕಳು ಗ್ರಾಮದೇವತೆ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ತೆರಳಿ ನೀರೂ ನೇವೇದ್ಯ ಸರ್ಮಸಿದರು, ಬೆಳಗಿನ ಜಾವ ಬ್ರಾಹ್ಮಿ ಮುಹೋರ್ತದಲ್ಲಿ ಶ್ರೀ ಮಳೆರಾಜೇಂದ್ರ ಸ್ವಾಮಿಮಠ ಪೂಜ್ಯರಾದ ಮೌನೇಶ್ವರ ಸ್ವಾಮಿಗಳು ಹಾಗೂ ಗುರುನಾಥಸ್ವಾಮಿಗಳ ನೇತೃತ್ವದಲ್ಲಿ ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ಶ್ರೀ ಸೂಕ್ತ, ಪುರುಷಸೂಕ್ತ,
ನಂತರ ಶ್ತೀ ಚಕ್ರಕ್ಕೆ ಸಹಸ್ರ ನಾಮಾವಳಿ, ರಾಜರಾಜೇಶ್ವರಿ ಅಷ್ಟೋತ್ತರ ಶತನಾಮಾವಳಿ ಮೂಲಕ ಕುಂಕುಮಾರ್ಚನೆ, ಏಲೆಪೂಜೆ, ಪುಷ್ಪಾಲಂಕಾರ, ಮಹಾಮಂಗಳಾರುತಿ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು,

ಸಂಜೆ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಶ್ರೀ ಗ್ರಾಮದೇವಿ ಘಳಿಗೆಯನ್ನು ಮೇರವಣಿಗೆ ಮೂಲಕ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗ್ರಾಮದೇವಿ ದೇವಸ್ಥಾನಕ್ಕೆ ತಲುಪಿದರು,  ಮೇರವಣಿಗೆಯಲ್ಲಿ ಡೊಳ್ಳು ವಾದ್ಯಗಳ ಮೂಲಕ ಛತ್ರಿ ಚಾಮರಗಳು. ಸುಮಂಗಲೆಯರು ಆರತಿ ಹಿಡಿದು ದೇವಿ ಘಳಿಗೆ
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ನೀರು ಹಾಕಿ ಸ್ವಾಗತಿಸಿ,ಪೂಜೆ ಪುನಸ್ಕಾರ ಕೈಗೊಂಡರು.

ಇರಗಾರ್ಕಿ ರೋಮಾಂಚನ : ಪ್ರತಿವರ್ಷದಂತೆ ಈ ವಷವೂ ಮೇರವಣಿಗೆಯಲ್ಲಿ ಇರಗಾರ್ಕಿ ವಿಶೇಷವಾಗಿತ್ತು, ಇರಗಾರ್ಕಿ , ಕಬ್ಬಿನದ ಗುಂಡುಗಳಿರುವ ಗೊಂಚಲುಗಳನ್ನು ಕೈಯಲ್ಲಿ ಹಿಡಿದು,ದೋಳ್ಳಿನ ರಣ ಹಲಗೆಯ ಶಬ್ಧದ ವೇಗಕ್ಕೆ ಹೋಗಿ,ತನ್ನೊಳಗಿನ ಪೌರುಷಗಳಿಂದ ಆ ಕಬ್ಬಿನ  ಗುಂಡುಗಳಿಂದ ದುಬ್ಬಕ್ಕೆ ಬಡಿಕೋಳ್ಳುವುದು ರೋಮಾಂಚನವಾಗಿತ್ತು, ಮೆರವಣಿಗೆ ದೇವಸ್ಥಾನ ತಲುಪಿಸ ನಂತರ ಮುಂದಿನ ವರ್ಷಗಳ ಆಗುಹೋಗುಗಳ ಮುನ್ಸೂಚನೆಗಳನ್ನು ಅನೇಕರು ತಿಳಿದುಕೊಂಡು, ನಂತರ ಗ್ರಾಮದೇವಿಗೆ ಘಳಿಗೆಯನ್ನು ಊಡಿಸಿ ಪೂಜ್ಯರೂ ಹಾಗೂ ಗ್ರಾಮದ ಹಿರಿಯರು ಊಡಿ ತುಂಬಿ ಮಹಾ
ಮಂಗಳಾರುತಿ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದೆ ಸಂದರ್ಭದಲ್ಲಿ ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಮಳೆ ಬೆಳೆ ಚೆನ್ನಾಗಿ ಬರಲಿ ರೈತ ಸಮೃದ್ದಿಯಿಂದ ಇರಲಿ, ಗ್ರಾಮದಲ್ಲಿ ಯಾವುದೆ ರೋಗ ರುಜಿಣಗಳು ಬಾರದೇ, ಎಲ್ಲರೂ ಸುಖ ಸಮೃದ್ದಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಪೂಜ್ಯರಾದ ಮೌನೇಶ್ವರ ಸ್ವಾಮಿಗಳು,ಜಗನ್ನಾಥಸ್ವಾಮಿಗಳು, ಗುರುನಾಥ ಸ್ವಾಮಿಗಳು, ಗ್ತಾಮದ ಹಿರಿಯರಾದ ಶಿವಣ್ಣಮಾಸ್ತರ ಬೂದಿಹಾಳ,ಹುಚ್ಚಪ್ಪ ಶಿರೂರ, ಶಂಕ್ರಪ್ಪ ಪತ್ತಾರ, ರಾಮಣ್ಣ ಗಣಿ. ತಮ್ಮಣ್ಣ ಪತ್ತಾರ, ಅಶೋಕ ಪತ್ತಾರ, ಸಿದ್ದಪ್ಪ ಮುಚಖಂಡಿ, ಶ್ರಿಶೈಲ ಬಾಳಿಕಾಯಿ,
ಈರಪ್ಪ ಶಿರೂರ, ವಿವೇಕಾನಂದ ಗೂಗಿಹಾಳ,ಮಂಜುನಾಥ ಬಾರಕೇರ, ಈರಣ್ಣ ಬಡಿಗೇರ, ದುಶೆಂಗೆಪ್ಪ ವಡ್ಡರ,ನವೀನ  ಜೋಳದ,ಶ್ರೀಕಾಂತ ಬಿಸಾಳಿ,ಶಶಿ ವರದನ್ನವರ,ಮಳಿಯಪ್ಪ ದಾಸರ ಸೇರಿದಂತೆ ಗ್ರಾಮಸ್ಥರು ಪಾಲ್ಘೊಂಡಿದ್ದರು.

 

WhatsApp Group Join Now
Telegram Group Join Now
Share This Article