ನೇಸರಗಿ.ಮಹಿಳೆಯರು ಆರ್ಥಿಕವಾಗಿ ಸಭಲರಾಗಲು, ಅರೋಗ್ಯ ತಪಾಸಣೆ, ದೇವಸ್ಥಾನಗಳ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ಮೂಲಭೂತ ಸೌಕರ್ಯ, ಇನ್ನೂ ಅನೇಕ ಮಾನವನ ಅಭಿವೃದ್ಧಿಗೆ ಅನೇಕ ಕಾರ್ಯಗಳನ್ನು ಮಾಡುತ್ತಿರುವ ಶ್ರೀ ವೀರೇಂದ್ರ ಹೆಗಡೆ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ನಿರಂತರವಾಗಿ ಮಾಡುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂದು ಅತಿಯಾಗಿ ವಿನಾಕಾರಣ ಖರ್ಚು ಮಾಡದೇ ಮಿತವಾಗಿ ಜೀವನ ನಡೆಸಿ ಜೀವನದಲ್ಲಿ ಬೆಳವಣಿಗೆ ಹೊಂಡಬೇಕು ಎಂದು ಸುತಗಟ್ಟಿ ಗ್ರಾಮದ ಹಿರೇಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೈಲಹೊಂಗಲ ತಾಲೂಕಾ ಯೋಜನಾ ಕಚೇರಿ ವ್ಯಾಪ್ತಿಯ ಸುತಗಟ್ಟಿ ಗ್ರಾಮದಲ್ಲಿ ಸಂಜೀವಿನಿ ಜ್ಞಾನವಿಕಾಸ ಕೇಂದ್ರದಲ್ಲಿ ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸಾಯಿ ದೀಪ ಕಣ್ಣಿನ ಆಸ್ಪತ್ರೆ ಬೆಳಗಾವಿ ಮತ್ತು ಇಶಾ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬೈಲಹೊಂಗಲ ಇವರ ಸಹಯೋಗದಲ್ಲಿ ಉಚಿತ ಥೈರೈಡ್ ಮತ್ತು ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಮದ್ಯಪಾನ ಸoಯಮ ಮಂಡಳಿಯ ಅಧ್ಯಕ್ಷರು, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ತುಬಾಕಿ ಅತಿಥಿಗಳಾಗಿ ಆಗಮಿಸಿದ್ದರು. ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಬಸವರಾಜ ತುಬಾಕಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅನುಸೂಯ, ಉಪಾಧ್ಯಕ್ಷರಾದ ಪಾರ್ವತಿ, ಸಾಯಿ ದೀಪ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಅಭೀಧಲಿ, ಇಶಾ ಆಸ್ಪತ್ರೆ ಸಿಬ್ಬಂದಿ ಸಂತೋಷ ಇವರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲೆಯ ವಿಮಾ ಸಮನ್ವಧಿಕಾರಿ ಧನಂಜಯ ಅವರು ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘದ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಸಮುದಾಯ ಅಭಿವೃದ್ಧಿ, ಮಾಶಾಸನ ವಾತ್ಸಲ್ಯ, ಸುಜ್ಞಾನಿಧಿ ಶಿಷ್ಯವೇತನ,ಜಲಮಂಗಳ ಆರೋಗ್ಯ ರಕ್ಷಾ,ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಬಗ್ಗೆ ಕಣ್ಣಿನ ಸಂರಕ್ಷಣೆ ಹೇಗೆ,ಕಣ್ಣುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ,ದೃಷ್ಟಿದೋಷ ಹಾಗೂ ಕಣ್ಣಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಹಾಗೂ 100 ಜನ ಸದಸ್ಯರ ಕಣ್ಣಿನ ತಪಾಸಣೆ ಹಾಗೂ ಥೈರಾಡ್ ಪರೀಕ್ಷೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ನಿರೂಪಣೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ನೆರವೇರಿದರೆ, ಸ್ವಾಗತವನ್ನು ವಲಯದ ಮೇಲ್ವಿಚಾರಕರಾದ ಪಕೀರಪ್ಪಾ ನೆರವೇರಿಸಿದರು. ಸೇವಾಪ್ರತಿನಿಧಿ ಪುಷ್ಪಾ ಹಾಗೂ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.