ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ 33 ನೇ ಜಾತ್ರಾ ಮಹೋತ್ಸವ: ಪ್ರವಚನ, ಲಕ್ಷ ದೀಪೋತ್ಸವ ಕಾರ್ಯಕ್ರಮ!

Ravi Talawar
ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ 33 ನೇ ಜಾತ್ರಾ ಮಹೋತ್ಸವ: ಪ್ರವಚನ, ಲಕ್ಷ ದೀಪೋತ್ಸವ ಕಾರ್ಯಕ್ರಮ!
WhatsApp Group Join Now
Telegram Group Join Now
ನೇಸರಗಿ, ಏಪ್ರಿಲ್​ 05:  ಇಲ್ಲಿನ ಸುಪ್ರಸಿದ್ದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ 33 ನೇ ಜಾತ್ರಾ ಮಹೋತ್ಸವವು ಇಂದು ಶುಕ್ರವಾರ ದಿ. 05-04-2024 ರಿಂದ 10-04-2024 ರವರೆ ಜರುಗಲಿವೆ.
ದಿ.6 ರಂದು ಬೆಳಿಗ್ಗೆ 6 ಕ್ಕೆ ರುಧ್ರಾಭಿಷೇಕ,ಮಹಾಪೂಜೆ,ಮದ್ಯಾನ್ಹ 3 ಕ್ಕೆ ಗ್ರಾಮದ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ ,ಬೃಹತ್ ಕುಂಭಮೇಳ,ಪಲ್ಲಕ್ಕಿ ಉತ್ಸವ,ಸಂಜೆ 5 ಕ್ಕೆ ಕಳಸಾರೋಹನ ನೇರವೇರಲಿದ್ದು. ದಿ. 6,7,8 ರಂದು ನಾಡಿನ ಅನೇಕ ಮಹಾಸ್ವಾಮಿಗಳಿಂದ ಪ್ರವಚನ ಕಾರ್ಯಕ್ರಮ ಮತ್ತು ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ಜಾತ್ರಾ ಕಾರ್ಯಕ್ರಮದಲ್ಲಿ ಅಂಕಲಗಿಯ ಅಮರೇಶ್ವರ ದೇವರು,ಹುಣಶ್ಯಾಳ ಪಿಜಿ ಯ ಶ್ರೀ ನಿಜಗುಣ ದೇವರು, ಅವರೊಳ್ಳಿಯ ಶ್ರೀ ಚನ್ನಬಸವ ದೇವರು,  ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ದತ್ತವಾಡ ಹೃಷಕೇಶಾನಂದ ಶ್ರೀಗಳು, ಯರಗೊಪ್ಪ ದ ಶಿವಪ್ಪಜ್ಜನವರು,ಸವಟಗಿಯ ಶ್ರೀ ಲಿಂಗಯ್ಯ ಶ್ರೀಗಳು,ಮದನಬಾವಿಯ ಮಾತೃಶ್ರೀ ಶಿವದೇವಿ ತಾಯಿ,ಹಾರೂಗೊಪ್ಪದ ಮಾತೃಶ್ರೀ ಶಿವಯೋಗಿನಿ ತಾಯಿಯವರು ಪಾಲ್ಗೊಳ್ಳಲಿದ್ದಾರೆ. ಮತ್ತು ಮಂಗಳವಾರ ದಿ.9 ರಂದು ಸಂಜೆ 4 ಘಂಟೆಗೆ ಮಹಾ ರಥೋತ್ಸವ ನೇರವೇರುವದು. ಮತ್ತು ದಿ. 10 ರಂದು ಸಾಯಂಕಾಲ ಕಳಸ ಇಳಿಸುವದು ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನೇರವೇರಲಿವೆ.
 ಜಾತ್ರೆಯಲ್ಲಿ ವಿಶೇಷವಾಗಿ ಇಂದು ಶುಕ್ರವಾರ  ದಿ.5 ಮತ್ತು ದಿ. 6 ರಂದು ಖಾಲಿ ಗಾಡಾ ಚಕ್ಕಡಿ ಓಡಿಸುವ ಶರ್ಯತ್ತು ಏರ್ಪಡಿಸಲಾಗಿದೆ.ಪ್ರಥಮ ಬಹುಮಾನ ರೂ. 40,000/- ದ್ವೀತಿಯ ರೂ35,000/- ತೃತೀಯ ರೂ 30,000/- ನಾಲ್ಕನೇ ರೂ.25000/-ಐದನೇ 20,000/- ಹೀಗೆ 6  ರಿಂದ 15 ನೇ  ಸ್ಥಾನದವರಗೆ ರೂ.18,000/- ದಿಂದ ರೂ. 4000/-  ವರೆಗೆ ಬಹುಮಾನ ನೀಡಲಾಗುವದು.ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ.ನಂ. 6363713660,9148323587,9844970597ಈ ನಂಬರಗೆ ಸಂಪರ್ಕಿಸಿರಿ ಎಂದು ಶ್ರೀ ಚನ್ನವೃಷಬೇಂದ್ರ ದೇವರ ಜಾತ್ರಾ ಕಮೀಟಿ ತಿಳಿಸಿದೆ.
WhatsApp Group Join Now
Telegram Group Join Now
Share This Article