ಮಾರ್ಚ 26 ರಿಂದ ನೇಸರಗಿಯ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೆ ಪ್ರಾರಂಭ.

Ravi Talawar
ಮಾರ್ಚ 26 ರಿಂದ ನೇಸರಗಿಯ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೆ ಪ್ರಾರಂಭ.
WhatsApp Group Join Now
Telegram Group Join Now
ನೇಸರಗಿ. ಇಲ್ಲಿನ ಪ್ರತಿಷ್ಠಿತ  ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದ 34 ನೇ ಜಾತ್ರಾ ಮಹೋತ್ಸವವು ಬುಧವಾರ ದಿ. 26-03-2025 ರಂದು ಪ್ರಾರಂಭವಾಗಲಿದ್ದು ,ಜಾತ್ರಾ  ಕಾರ್ಯಕ್ರಮದಲ್ಲಿ   ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ನೇಸರಗಿ ಮಲ್ಲಾಪೂರ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರೆ ಜರುಗಲಿದೆ. ದಿ. 26 ರಂದು  ಬೆಳಿಗ್ಗೆ 6 ಘಂಟೆಗೆ  ಶ್ರೀ ಚನ್ನವೃಷಬೇಂದ್ರ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ನಡೆಯುವದು. ಮದ್ಯಾಹ್ನ 3 ಘಂಟೆಗೆ ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಮುತೈದ್ಯೇಯರಿಂದ ಬ್ರಹತ್ ಕುಂಭಮೇಳ, ಅಜ್ಜನವರ ಪಲ್ಲಕ್ಕಿ ಉತ್ಸವ, ಗ್ರಾಮದೇವಿಯರಿಗೆ ಉಡಿ ತುಂಬುವದು. ಸಂಜೆ 5 ಘಂಟೆಗೆ ಕಳಸರೋಹಣ ನೆರವೇರುವದು.
ದಿ. 26,27,28 ರಂದು ದಿನಾಲೂ ರಾತ್ರಿ 8 ಘಂಟೆಗೆ  ಪ್ರವಚನ ನಂತರ ಗ್ರಾಮದ ಭಕ್ತರಿಂದ ಪ್ರಸಾದ ಸೇವೆ ಮಹಾಪ್ರಸಾದ ಜರುಗುವದು. ಶನಿವಾರ ದಿ. 29-03-2025 ರಂದು ರಾತ್ರಿ 9-00 ಘಂಟೆಗೆ  ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದ ಎದುರಿಗೆ ಎ ಪಿ ಎಮ ಸಿ ಮೈದಾನದಲ್ಲಿ ನಿರ್ಮಿಸಿರುವ  ಬ್ರಹತ್ ರಂಗಮಂಟಪದಲ್ಲಿ    ಶ್ರೀ ಸದ್ಗುರು ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಸ್ವಾಮಿಗಳು ಭಾವಿಹಾಳ ಇವರ ದಿವ್ಯ ಸಾನಿಧ್ಯದಲ್ಲಿ ಧಾರವಾಡ ಜಿಲ್ಲೆಯ, ಕಲಘಟಗಿ ತಾಲೂಕಿನ ದೇವರಕೊಂಡ ಗ್ರಾಮದ   ಶ್ರೀ ಚನ್ನವೃಷಬೇಂದ್ರ ನವ ತರುಣ ನಾಟ್ಯ ಸಂಘ ಇವರಿಂದ” ಶ್ರೀ ಅವತಾರ ಶಿದ್ದಯೋಗಿ ಶ್ರೀ  ಚನ್ನವೃಷಬೇಂದ್ರ ಮಹಾತ್ಮೆ” ಭಕ್ತಿ ಪ್ರಧಾನ ನಾಟಕ ಜರುಗುವದು. ರವಿವಾರ ದಿ. 30-03-2025 ರಂದು ಸಾಯಂಕಾಲ  4 ಘಂಟೆಗೆ ಅಜ್ಜನವರ ಮಹಾ ರಥೋತ್ಸವ ನೆರವೇರುವದು. ಮಾರ್ಚ್ 25 ಹಾಗೂ ಮಾರ್ಚ್  26  ರಂದು ಶ್ರೀ ಚನ್ನವೃಷಬೇಂದ್ರ ಅಜ್ಜನವರ ಜಾತ್ರೆ ಪ್ರಯುಕ್ತ” ರಾಜ್ಯ ಮಟ್ಟದ ಖಾಲಿ ಗಾಡಾ ಚಕ್ಕಡಿ ಓಡಿಸುವ ಶರ್ಯತ್ತು”  ಏರ್ಪಡಿಸಲಾಗಿದ್ದು. ಪ್ರಥಮ ಬಹುಮಾನ ರೂ. 50,000/- ದ್ವಿತೀಯ ರೂ. 40,000/- ತೃತೀಯ ರೂ. 35,000/- ಮತ್ತು ಒಟ್ಟು 17 ಸ್ಥಾನದಲ್ಲಿ ಬರುವ ಜೋಡಿ ಎತ್ತುಗಳಿಗೆ ಬಹುಮಾನ ನೀಡಲಾಗುವದು. ದಿ.31 ರಂದು ಸಂಜೆ ಕಳಸ ಇಳಿಸುವದು, ಲಕ್ಷ ದೀಪೋತ್ಸವ, ಮಹಾಪ್ರಸಾದ ಕಾರ್ಯಕ್ರಮ ನಡೆಯುತ್ತವೆ. ಜಾತ್ರೆ ನಡೆಯುವ ಪ್ರತಿದಿನ ಪ್ರವಚನಕ್ಕೆ ಹುಣಸ್ಯಾಳ ಪಿ. ಜಿ ಮಠದ ಶ್ರೀ ನಿಜಗುಣ ದೇವರು, ಅರವೊಳ್ಳಿಯ ಚನ್ನಬಸವ ದೇವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ಧತ್ತವಾಡದ ಹೃಷಿಕೇಶಾನಂದ   ಮಹಾರಾಜರು, ಹಾರುಗೋಪ್ಪದ ಶಿವಪ್ಪ ಅಜ್ಜನವರು, ಸವಟಗಿಯ ಲಿಂಗಯ್ಯ ಶ್ರೀಗಳು, ಮದನಭಾವಿಯ ಮಾತೋಶ್ರೀ ಶಿವದೇವಿ ತಾಯಿ, ಹಾರುಗೋಪ್ಪದ ಮಾತೋಶ್ರೀ ಶಿವಯೋಗಿಣಿ ತಾಯಿ ಮುಂತಾದ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮಿಟಿ ಸದಸ್ಯರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article