ಕೀರ್ತನೆ ಮೂಲಕ ಸಮಾಜದ ಡೊಂಕು ತಿದ್ದಿದ ಶ್ರೀ ಭಕ್ತ ಕನಕದಾಸ: ಸದಾಶಿವ ಗುರೂಜಿ

Pratibha Boi
ಕೀರ್ತನೆ ಮೂಲಕ ಸಮಾಜದ ಡೊಂಕು ತಿದ್ದಿದ ಶ್ರೀ ಭಕ್ತ ಕನಕದಾಸ: ಸದಾಶಿವ ಗುರೂಜಿ
WhatsApp Group Join Now
Telegram Group Join Now

ರನ್ನ ಬೆಳಗಲಿ:ನ.೦೮., ಪಟ್ಟಣದ ಶ್ರೀ ಭಕ್ತ ಕನಕದಾಸ ಭವನದ ಆವರಣದಲ್ಲಿ ಶನಿವಾರ ದಂದು ಶ್ರೀ ಭಕ್ತ ಕನಕದಾಸ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೇ? ಭಕ್ತ ಕನಕದಾಸರ ೫೩೮ನೇ ಜಯಂತಿ ಕಾರ್ಯಕ್ರಮ ಜರಗಿತು.
ರನ್ನ ಬೆಳಗಲಿ ಪ್ರಮುಖ ಬೀದಿಗಳಲ್ಲಿ ಶ್ರೀ ಭಕ್ತ ಕನಕದಾಸರ ಭವ್ಯ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯಮೇಳ ಮತ್ತು ಸುಮಂಗಲಿಯರ ಕುಂಭಾರತಿಗಳ ಜೊತೆಗೆ ವೈಭವದಿಂದ ನಡೆಯಿತು.

ಯೋಗಿರಾಜೇಂದ್ರ ಸದಾಶಿವ ಗುರೂಜಿ ಸಾನಿಧ್ಯ ವಹಿಸಿ ಕೀರ್ತನೆ ಮೂಲಕ ಸಮಾಜದ ಡೊಂಕು ತಿದ್ದಿದ, ಶ್ರೀ ಭಕ್ತ ಕನಕದಾಸರು.೫೩೮ವ?ಗಳ ಹಿಂದೆ ಉದಯಿಸಿದ ಸರ್ವಕಾಲಿಕ ಚೇತನ ಶಕ್ತಿಯೇ ಕನಕದಾಸರು. ಇಡೀ ಮಾನವ ಕುಲಕ್ಕೆ ಮಾನವೀಯ ಧರ್ಮದ ಬೋಧನೆ ನೀಡಿದ್ದಾರೆ ಎಂದು ತಿಳಿಸಿದರು.

ಪರಮ್ ಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು ಪ್ರತಿ ಸಮಾಜದ ತಳಪಾಯ ಗಟ್ಟಿಗೊಳ್ಳುವುದು ಶಿಕ್ಷಣ ಮತ್ತು ಸಂಸ್ಕಾರಗಳಿಂದ.ತನ್ನ ಸಮಾಜದ ಹಿನ್ನೆಲೆ ಅರಿತುಕೊಂಡು ಹಿರಿಯರ ಬದುಕಿನಂತೆ. ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಇಂದಿನ ಯುವಕರು ಸಂಸ್ಕಾರವಿಲ್ಲದೆ ಶಿಕ್ಷಣ ಪಡೆದುಕೊಂಡು. ಉದ್ಯೋಗ ಮಾಡುತ್ತ ತಂದೆ ತಾಯಿಯರನ್ನು ದೂರ ತಳುತ್ತಿದ್ದಾರೆ. ಇದು ಆಘಾತಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.

ಲಕ್ಕಪ್ಪ ಹಾರೂಗೇರಿ ಅಧ್ಯಕ್ಷತೆ ವಹಿಸಿದ್ದರು,ಧರೆಪ್ಪ ಸಾಂಗ್ಲಿಕರ, ಮಹಾಲಿಂಗಪ್ಪ ಗುಂಜಿಗಾಂವಿ, ಸಿದ್ದುಗೌಡ ಪಾಟೀಲ, ಕೆ ಬಿ ಕುಂಬಾಳಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಸನ್ ೨೦೨೪-೨೫ನೇ ಸಾಲಿನ ಪಿಯುಸಿ ಮತ್ತು ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ,ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಿದರು.
ಸದಾಶಿವ ಹೊಸಟ್ಟಿ, ಸಂಗಪ್ಪ ಅಮಾತಿ, ನೀಲಕಂಠ ಸೈದಾಪುರ, ಮುಬಾರಕ್ ಅತ್ತಾರ್, ಕರೆಪ್ಪ ಕುಂಬಾಳಿ, ಮಹಾದೇವ ಕುಂಬಾಳಿ, ಹನಮಂತ ಮಣ್ಣಿಕೇರಿ, ಲಕ್ಷ್ಮಣ ಕ್ವಾನ್ಯಾಗೊಳ, ರಾಮಪ್ಪ ಪೂಜೇರಿ, ಕೆಂಚಪ್ಪ ಕಂಬಳಿ,ಚನ್ನಪ್ಪ ಜಾಲಿಕಟ್ಟಿ,ನಿಂಗಪ್ಪ ಆರೇನಾಡ, ಮುದಕಪ್ಪ ದೋಬಸಿ, ಬಸಪ್ಪ ಬಡಿಗೇರ,ರಾಮನಗೌಡ ಪಾಟೀಲ, ಈಶ್ವರ ಅಮಾತಿ, ಶಿವಯ್ಯ ಮೆಟಗುಡ್ಡ,ಸದಾಶಿವ ಪೂಜೇರಿ, ಚಿನ್ನಪ್ಪ ಪೂಜೇರಿ,ಮುತ್ತು ಕ್ವಾನ್ಯಾಗೋಳ, ಬಸಪ್ಪ ಪೂಜೇರಿ, ಶಿವಪ್ಪ ಹಂಚಿನಾಳ, ಸಿದ್ದಲಿಂಗಪ್ಪ ಬೆಳ್ಳಿವರಿ, ಪರಮಾನಂದ ಹಿಪ್ಪರಗಿ, ಲಕ್ಕಪ್ಪ ಹಂಚಿನಾಳ,ಮಾರುತಿ ಜಾಲಿಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಮಲ್ಲಪ್ಪ ಕ್ವಾನ್ಯಾಗೋಳ ಸ್ವಾಗತಿಸಿದರು, ರಾಘವೇಂದ್ರ ನೀಲನ್ನವರ ನಿರೂಪಿಸಿದರು. ಪಟ್ಟಣದ ಎಲ್ಲಾ ಸಮಾಜದ ಗುರು ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article