ನಮ್ಮ ಯುವತಿಯರು, ಮಹಿಳೆಯರನ್ನು ಹೊತ್ತೊಯ್ದವರನ್ನು ಸನ್ಮಾನಿಸಬೇಕಾ: ಕನ್ನೇರಿ ಶ್ರೀ

Ravi Talawar
ನಮ್ಮ ಯುವತಿಯರು, ಮಹಿಳೆಯರನ್ನು ಹೊತ್ತೊಯ್ದವರನ್ನು ಸನ್ಮಾನಿಸಬೇಕಾ: ಕನ್ನೇರಿ ಶ್ರೀ
WhatsApp Group Join Now
Telegram Group Join Now
ಬೆಳಗಾವಿ :ಜಿಲ್ಲೆಯ ರಾಯಬಾಗ  ಪಟ್ಟಣದಲ್ಲಿ ಭಜರಂಗದಳದಿಂದ ಆಯೋಜಿಸಿದ್ದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ಕೋಲ್ಹಾಪುರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ಚಾಮೀಜಿಯವರು ನೀಡಿದ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿವೆ.  ನಮ್ಮ ಹುಡುಗಿಯರನ್ನ ಹೊತ್ತುಕೊಂಡು ಹೋಗುತ್ತಿದ್ದಾರೆ… ಅಂಥವರನ್ನ ಕರೆಯಿಸಿ ಆರತಿ ಬೆಳಗಬೇಕಾ? ಹಿಡಿದುಕೊಂಡು ಬಂದು ತಿಳಿಯುವ ಭಾಷೆಯಲ್ಲಿ ಹೇಳಬೇಕು! ಎಂಬ ವಾಕ್ಯವೇ ಕಾರ್ಯಕ್ರಮದ ಪ್ರಮುಖ ಸ್ಪೋಟಕ ಕ್ಷಣವಾಗಿತ್ತು.. ಬರಿ ತೀಕ್ಷ್ಣ ಹೇಳಿಕೆ ಮೂಲಕವೇ ಗೊಂದಲಕ್ಕೆ ದಾರಿಮಾಡಿಕೊಡುವ ಕನ್ನೇರಿ ಶ್ರೀಗಳ ಪದಪ್ರಯೋಗಗಳು ವಿವಾದದ ಸುಳಿಗಳಲ್ಲಿ ಸಿಲುಕುವ ಸಾಧ್ಯತೆ ತುಂಬಾ ಇದೆ. 
ಹನುಮ ಮಾಲಾ ಕಾರ್ಯಕ್ರಮದಲ್ಲಿ ಕಾವಿ ವಸ್ತ್ರ ಧರಿಸಿರುವ ಕೆಲ ಮಠಾಧೀಶರನ್ನು ಉದ್ದೇಶಿಸಿ ಮಾತನಾಡಿದ ಮಾತನಾಡಿದ ಕನ್ನೇರಿ ಶ್ರೀ, ನಾವು ಕಾವಿ ಬಟ್ಟೆ ಹಾಕಿಕೊಂಡಿರುವ ಬಸವ ತಾಲಿಬಾನಿಗಳು. ಹನುಮ ಮಾಲೆಯ ಬಗ್ಗೆ ಕೆಲವರು ಟೀಕೆ ಮಾಡಬಹುದು. ಕಮ್ಯುನಿಸ್ಟರೂ, ನಮ್ಮಂಥ ಕಾವಿ ಧರಿಸಿದ ಬಸವ ತಾಲಿಬಾನಿಗಳೂ ಅದನ್ನು ಪ್ರಶ್ನಿಸಬಹುದು ಎಂದು ಹೇಳಿಕೆ ನೀಡಿದರು. ‘ಬಸವ ತಾಲಿಬಾನಿ’ ಎಂಬ ಪದಪ್ರಯೋಗವೇ ವೇದಿಕೆಯಲ್ಲಿ ಅಚ್ಚರಿಗೆ ಕಾರಣವಾಯಿತು.
WhatsApp Group Join Now
Telegram Group Join Now
Share This Article