ಮೀನು ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್

Ravi Talawar
ಮೀನು ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್ 13: ಚಿಕನ್, ಮಟನ್ ಬಿಟ್ಟು ಮೀನು (Fish) ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್ ತಟ್ಟಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆಯಲ್ಲಿ ಶೇಕಡಾ 30 ರಷ್ಟು ಏರಿಕೆಯಾಗಿದೆ. ಎಲ್ಲಾ ರೀತಿಯ ಸಮುದ್ರ ಮೀನುಗಳ ದರದಲ್ಲಿ ವ್ಯತ್ಯಾಸ ಆಗಿದೆ.

ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಹಕ್ಕಿ ಜ್ವರದ ಕಾರಣ ಕೋಳಿ ಮಾಂಸ ಸಿಗುತ್ತಿಲ್ಲ. ಸಿಕ್ಕಿದರೂ ಅನೇಕರು ರೋಗ ಭೀತಿಯಿಂದ ಅದನ್ನು ಖರೀದಿ ಮಾಡುತ್ತಿಲ್ಲ. ಮತ್ತೊಂದೆಡೆ, ಮಟನ್ ದುಬಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ಮೀನಿನ ಬೇಡಿಕೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಮೀನು ಬೆಲೆ ಕೂಡ ದುಬಾರಿಯಾಗಿದೆ.

ಮೀನು ದರ ವಿವರ (ಹಿಂದಿನ ದರ – ಪ್ರಸ್ತುತ ದರ ಕೆಜಿ ಲೆಕ್ಕದಲ್ಲಿ)

  • ಅಂಜಲ್ 650 – 850
  • ಬಂಗುಡೆ 200 – 250
  • ಶಿಲಾ 350 – 400
  • ವೈಟ್ ಪಂಪ್ಲೆಟ್ 900 – 1200
  • ಬ್ಲಾಕ್ ಪಂಪ್ಲೇಟ್ 600 – 850
  • ಪ್ರಾನ್ಸ್ 380 – 450
  • ಕ್ರಾಬ್ 180 – 300
  • ಶಂಕರ 250 – 320
  • ತುನ 200 – 300
  • ಪಾರೆ 200 – 250
WhatsApp Group Join Now
Telegram Group Join Now
Share This Article