ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಐದು ಗ್ಯಾರಂಟಿ ಯೋಜನೆಗಳು ಭಾರೀ ಹೊರೆಯಾಗಿವೆ. ಇದರ ನಡುವೆ ಇದೀಗ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕಳೆದ ಐದು ತಿಂಗಳಿನಿಂದಲೂ ಬಿಡುಗಡೆ ಮಾಡದೆ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವುದರೊಂದಿಗೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನ, ಕಾಮಗಾರಿ, ಅನುದಾನ ಹಂಚಿಕೆ ಹಾಗೂ ಗುತ್ತಿಗೆದಾರರ ಬಿಲ್ ಬಾಕಿ ಸೇರಿದಂತೆ ಹಲವು ಕೆಲಸಗಳಿಗೆ ಹಣ ಬೇಕಾಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದಲೇ ಹೊರೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು. ಇದನ್ನು ಬಹಿರಂಗವಾಗಿ ಕರ್ನಾಟಕದ ಪ್ರಮುಖ ಸಚಿವರೇ ಹೇಳಿದ್ದಾರೆ. ಇದರಿಂದ ಸ್ಪಷ್ಟವಾಗಿ ಆರ್ಥಿಕ ಕೊರತೆ ತಿಳಿಯುತ್ತಿದೆ.
ಇದರ ನಡುವೆ ಈಗಾಗಲೇ ಎರಡು ಮೂರು ಬಾರಿ ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದೆ. ಇದೀಗ ಈ ಬಾರಿಯ ಬಜೆಟ್ನಲ್ಲೂ ಮದ್ಯ ಪ್ರಿಯರಿಗೆ ಶಾಕ್ ಫಿಕ್ಸ್. ಯಾಕೆಂದರೆ ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಆಯಾ ತಿಂಗಳೇ ಅನುಷ್ಠಾನ ಮಾಡುವ ಒತ್ತಡ ಹೆಚ್ಚಳವಾಗಿದೆ. ಅಲ್ಲದೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಳವಾಗಿದೆ. ಇದೀಗ ಕಿಕ್ ಪ್ರಿಯರಿಗೆ ಕಿಕ್ ಸಿಗಬೇಕಾದರೆ ದುಬಾರಿ ಮೊತ್ತ ಪಾವತಿ ಮಾಡುವ ಸಮಯ ಬರಲಿದೆ ಎಂದೇ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರವು ಅನುದಾನವನ್ನು ಹೊಂದಿಸುವ ಕಾರಣಕ್ಕೆ ಈ ಬಾರಿಯ ಬಜೆಟ್ನಲ್ಲಿ ಡ್ರಿಂಕ್ಸ್ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಬೆಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಅಲ್ಲದೆ ಈಗಾಗಲೇ ಎರಡು ತಿಂಗಳ ಹಿಂದಷ್ಟೇ ಸ್ಟ್ರಾಂಗ್ ಬಿಯರ್ನ ಬೆಲೆ ಹೆಚ್ಚಳ ಮಾಡಲಾಗಿದೆ.
ಇನ್ನು ಕರ್ನಾಟಕದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬಿಯರ್ ಬೆಲೆ ಹಾಗೂ ಕೆಲವು ಮದ್ಯದ ಬೆಲೆ ಹೆಚ್ಚಾಗಿದೆ. ಹೀಗಾಗಿ, ಬೆಲೆ ಪರಿಷ್ಕರಣೆ ಮಾಡಬೇಕು ಅಂತ ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಳವಾದಾಗಲೇ ಬಿಯರ್ ಮಾರಾಟಗಾರರು ಆಗ್ರಹಿಸಿದ್ದರು. ಆದರೆ ಬೆಲೆ ಏರಿಕೆಯ ನಂತರ ಡ್ರಿಂಕ್ಸ್ ಬೆಲೆ ಇಳಿಕೆ ಆಗಿಲ್ಲ.