ಸಿಲಿಕಾನ್ ಸಿಟಿ ಮಂದಿಗೆ ಶಾಕ್; ಕಾಫಿ ಇನ್ನಷ್ಟೂ ಕಾಸ್ಟ್ಲಿ!

Ravi Talawar
ಸಿಲಿಕಾನ್ ಸಿಟಿ ಮಂದಿಗೆ ಶಾಕ್; ಕಾಫಿ ಇನ್ನಷ್ಟೂ ಕಾಸ್ಟ್ಲಿ!
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಿನಲ್ಲಿರುವ ಕೆಫೆಗಳು ಮತ್ತು ರೆಸ್ಟೊರೆಂಟ್‌ಗಳು ಕಾಫಿ ಬೆಲೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿರುವುದಾಗಿ ವರದಿಯಾಗಿದೆ. ಕಾಫಿ ಬೀಜದ ದರ ಹೆಚ್ಚಳವೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇ 60ರಷ್ಟು ಏರಿಕೆಯಾಗಿದೆ. ಕರ್ನಾಟಕವು ಭಾರತದ ಅತಿದೊಡ್ಡ ಕಾಫಿ ಬೆಳೆಯುವ ರಾಜ್ಯವಾಗಿದ್ದು, ಇಲ್ಲಿಯೂ ದರ ಹೆಚ್ಚಳವಾಗಿದೆ. ಜತೆಗೆ, ಭಾರತದಾದ್ಯಂತ ಕಾಫಿ ಬೀಜದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 ರೂ. ಇದೆ.

ಹೊಸ ವರ್ಷದಿಂದ ದುಬಾರಿಯಾಗಲಿದೆ ಕಾಫಿ: ಹಲಸೂರು ಮತ್ತು ಕೋರಮಂಗಲದಲ್ಲಿ ಶಾಖೆಗಳನ್ನು ಹೊಂದಿರುವ ಮೇವರಿಕ್ ಮತ್ತು ಫಾರ್ಮರ್‌ನಲ್ಲಿ ಹೊಸ ವರ್ಷದಲ್ಲಿ ಕಾಫಿ ಬೆಲೆ ಶೇಕಡಾ 10 ರಿಂದ 20 ರಷ್ಟು ಏರಿಕೆಯಾಗಲಿವೆ. ನಮಗೆ ಪ್ರಸ್ತುತ ಸ್ವಲ್ಪ ಹಿನ್ನಡೆಯಾಗುತ್ತಿದೆ. ಇದನ್ನು ಎದುರಿಸಲು ನಾವು ಹೊಸ ಬೆಲೆ ನಿಗದಿಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಹ ಸಂಸ್ಥಾಪಕ ಆಶಿಶ್ ಡಿ’ಬ್ರೆಯೊ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಪ್ರಸ್ತುತ ಬಿಸಿ ಕಾಫಿ ದರ 180 ರಿಂದ 290 ರೂ, ಮತ್ತು ಕೋಲ್ಡ್ ಕಾಫಿ ದರ 250 ರಿಂದ 340 ರೂ. ನಡುವೆ ಇದೆ ಎಂದು ವರದಿ ಉಲ್ಲೇಖಿಸಿದೆ.

WhatsApp Group Join Now
Telegram Group Join Now
Share This Article