ಪ್ರೇಕ್ಷಕರ ಮನ ಮೆಚ್ಚಿದ ಶಿವರಾತ್ರಿ ಸಾಂಸ್ಕೃತಿಕ ಉತ್ಸವ

Sandeep Malannavar
ಪ್ರೇಕ್ಷಕರ ಮನ ಮೆಚ್ಚಿದ ಶಿವರಾತ್ರಿ ಸಾಂಸ್ಕೃತಿಕ ಉತ್ಸವ
WhatsApp Group Join Now
Telegram Group Join Now
ಬಳ್ಳಾರಿ.16…ಶಾಸ್ತ್ರೀಯ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಮನ ಮೆಚ್ಚಿಸಿತು. ಭಾನುವಾರ ರಾತ್ರಿ ಸತ್ಯನಾರಾಯಣ ಪೇಟೆ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶಿವರಾತ್ರಿ ಸಾಂಸ್ಕೃತಿಕ ಉತ್ಸವ 2026 ಕಾರ್ಯಕ್ರಮದಲ್ಲಿ ಕಲಾವಿದೆ ಶ್ರೀಜಾ ತಂಡ ಶಾಸ್ತ್ರೀಯ ನೃತ್ಯ ಪ್ರದರ್ಶನೆ ಭಕ್ತರನ್ನು ತನ್ಮಯ ಗೊಳಿಸಿತು. ವಸುಂಧರ ತಂಡದ ಭಕ್ತಿ ಗೀತೆಗಳ ಸಮೂಹ ನೃತ್ಯ ಪ್ರದರ್ಶನ ರಂಜಿಸಿತು. ನಂತರ ಗಾನ ಕಲಾವಿದರಾದ ಪರಿಮಳ,   ವೈದ್ಯರಾದ ಡಾ.. ಪ್ರಸಾದ್, ನೃತ್ಯ ಶಿಕ್ಷಕಿ ಶ್ರೀಜಾ, ವೇದಪಂಡಿತ ಗೋಪಿನಾಥ ಶರ್ಮ ರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಲೆ, ಸಾಹಿತ್ಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಇಂತಹ ಅನೇಕ ಕಾರ್ಯಕ್ರಗಳನ್ನು ಟ್ರಸ್ಟ್ ನಡಿಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದು ಗೋಪಿ ಶರ್ಮ ಮಾತನಾಡಿದರು. ಕಲಾವಿದರಿಗೆ ಪ್ರಶಸ್ತಿ ಪತ್ರ್, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಂಸ್ತೆಯ ಕಾರ್ಯದರ್ಶಿ ವಿ.ರಾಮಚಂದ್ರ, ಉಪಾಧ್ಯಕ್ಷ ಶ್ರೀಧರ್, ಶಿವರುದ್ರಯ್ಯ, ಜಡೆಪ್ಪ, ವೆಂಕಟೇಶ , ಶೈನು, ಅಮೃತ, ಸಿಂಧು, ದೀಕ್ಷಾ, ಭಾಂಧವಿ, ಸೋನು, ಕೀರ್ತಿ, ದೀಪ್ತಿ ,ರಾಧಾಕೃಷ್ಣ, ಕಲಾವಿದರು, ಭಕ್ತರು ಮುಂತಾದವರು ಇದ್ದರು..
WhatsApp Group Join Now
Telegram Group Join Now
Share This Article