ಅಥಣಿ: ಶತಮಾನೋತ್ಸವದ ಹೊಸ್ತಿನಲ್ಲಿ ಇರುವ ಶ್ರೀ ಶಿವಯೋಗಿ ಮುರಘೇಂದ್ರ ಸ್ವಾಮಿ ಅರ್ಬನ್ ಕೋ-ಆಪ್ ಬ್ಯಾಂಕ್ನ ಆಡಳಿತ ಮಂಡಳಿ ಚುನಾವಣೆ ೫೦ ವರ್ಷಗಳ ನಂತರ ರವಿವಾರ ಪಟ್ಟಣದ ಕನ್ನಡ ಪ್ರಾಥಮಿಕ ಶಾಲೆ ನಂ ೩ ರಲ್ಲಿ ಜರುಗಿತು.
ಶಾಸಕ ಲಕ್ಷö್ಮಣ ಸವದಿ ಅವರು ಭೂತ ಸಂಖ್ಯೆ ೯ ರಲ್ಲಿ ತಮ್ಮ ಮತದಾನದ ಹಕ್ಕು ಚಾಲಾಯಿಸಿ ಮಾತನಾಡಿದ ಅವರು ಅತ್ಯಾಂತ ಪ್ರಮುಖವಾದ ಬ್ಯಾಂಕುಗಳಲ್ಲಿ ಒಂದಾಗಿರುವ ಶ್ರೀ ಶಿವಯೋಗಿ ಮುರುಘೇಂದ್ರ ಬ್ಯಾಂಕಿನ ಶತಮಾನೋತ್ಸವದ ಸಮಯದಲ್ಲಿ ಚುನಾವಣೆ ನಡೆಯುತ್ತಿದ್ದು ಸಹಕಾರಿ ಕ್ಷೇತ್ರದ ಉತ್ತಮ ಬ್ಯಾಂಕುಗಳಲ್ಲಿ ಇದು ಒಂದಾಗಿದೆ. ಇಂದು ಮತದಾನ ಇದ್ದು ನನ್ನ ಪಾಲಿನ ಹಕ್ಕನ್ನು ಚಲಾಯಿಸಿದ್ದೇನೆ ಎಂದು ಹೇಳಿದರು
ಶಿವಯೋಗಿ ಮುರುಘೇಂದ್ರ ಸ್ವಾಮಿ ಅರ್ಬನ ಬ್ಯಾಂಕಿನಲ್ಲಿ ಒಟ್ಟು ೫೪೮೫ ಮತದಾರರಿದ್ದು, ಒಟ್ಟು ೧೩ ಸ್ಥಾನಗಳಿಗೆ ಚುನಾವಣೆ ನಡೆಯಿತು. ೭ ಸಾಮಾಜ್ಯ ಕ್ಷೇತ್ರ, ೨ ಮಹಿಳಾ ಕ್ಷತ್ರ, ೧ ಹಿಂದೂಳಿದ ವರ್ಗ ಅ, ೧ ಹಿಂದೂಳಿದ ವರ್ಗ ಬ, ೧ ಪರಿಶಿಷ್ಟ ಜಾತಿ, ೧ ಪರಿಶಿಷ್ಟ ಪಂಗಡ ವರ್ಗದಲ್ಲಿ ಒಟ್ಟು ೨೮ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತ ಎಣಿಕೆಯನ್ನು ರವಿವಾರ ಸಂಜೆ ನಡೆಸಲಾಗುವದು