ನೇಸರಗಿ. ಫೆ. 26. ಇಲ್ಲಿನ ಸುಪ್ರಸಿದ್ದ ಪ್ರಾಚೀನ ರಟ್ಟರ ಕಾಲದ ಶ್ರೀ ಜೋಡಗುಡಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು.
ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆ ಈ ಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಶಿವನ ಸ್ಮರಣೆ ಮಾಡಿದರು . ಶ್ರೀ ಜೋಡಗುಡಿ ಉತ್ಸವ ಕಮಿಟಿಯ ಸದಸ್ಯರು ಸಾಬುಧಾನಿ, ಬಾಳೆಹಣ್ಣು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು..