ಗುರುಮಿಟ್ಕಲ್ ಇಬ್ಬರು ಹೆಣ್ಣು ಮಕ್ಕಳ ಸಾವನ್ನು ಸಿಐಡಿಗೆ ಹಸ್ತಾಂತರ ಮಾಡಿ : ಶಿವಕುಮಾರ್ ಹಳೆಕೋಟೆ ಆಗ್ರಹ

Ravi Talawar
ಗುರುಮಿಟ್ಕಲ್ ಇಬ್ಬರು ಹೆಣ್ಣು ಮಕ್ಕಳ ಸಾವನ್ನು ಸಿಐಡಿಗೆ ಹಸ್ತಾಂತರ ಮಾಡಿ : ಶಿವಕುಮಾರ್ ಹಳೆಕೋಟೆ ಆಗ್ರಹ
WhatsApp Group Join Now
Telegram Group Join Now
  ಬಳ್ಳಾರಿ ಫೆಬ್ರವರಿ 25. : ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಇಂದ್ರ ನಗರ ನಿವಾಸಿಗಳಾದ ಶ್ಯಾಮಮ್ಮ ಮತ್ತು ಸಾಯಮ್ಮ ಈ ಇಬ್ಬರ ಸಾವು ಅನುಮಾನಾಸ್ಪದ ವಾಗಿದ್ದು  ಇವರ ಸಾವಿನ ಪ್ರಕರಣವನ್ನು ಸಿಐಡಿ ಗೆ  ವಹಿಸಿ ಸೂಕ್ತ ತನಿಖೆ ಮಾಡಿ  ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕರ್ನಾಟಕ ರಾಜ್ಯ ಪ್ರಜಾ ಪರಿವರ್ತನಾ ವೇದಿಕೆಯ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹಳೆಕೋಟೆ  ಸರ್ಕಾರವನ್ನು ಆಗ್ರಹಿಸಿದರು
 ಅವರೆಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಈ ಇಬ್ಬರು ಅಮಾಯಕ ಮಹಿಳೆಯರು ಅಲೆಮಾರಿ ಬುಡ್ಗಜ್ಜಂಗಮ  ಜನಾಂಗಕ್ಕೆ ಸೇರಿದ್ದು ತಮ್ಮ ಜೀವನೋಪಾಯಕ್ಕಾಗಿ ಚಿಂದಿ  ಆಯುವ  ಕೆಲಸಕ್ಕೆ ಹೋದಾಗ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆಗೈದು  ಸೈದಾಪುರ ಪಕ್ಕದ ನೀಲ ಹಳ್ಳಿಯ ಕೆರೆಯಲ್ಲಿ ಶವಗಳನ್ನು ಬೀಸಾಕಿರುವ ಸಾಧ್ಯತೆ ಇದೆ ಸ್ಥಳೀಯ ರಾಜಕಾರಣಿಗಳು ಈ ಪ್ರಕರಣವನ್ನು ಸುಳ್ಳು ಹೇಳಿಕೆಗಳಿಂದ ಮುಚ್ಚಿ ಹಾಕುವ ಸಾಧ್ಯತೆ ಇದೆ ಕಾರಣ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ಇಂದ ಉನ್ನತ ತನಿಖೆ ಮಾಡಿ ಪ್ರಕರಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಮತ್ತು ಆ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು, ಅವರ ಕುಟುಂಬಗಳಿಗೆ ಸ್ಥಳೀಯ ರಾಜಕಾರಣಿಗಳಿಂದ ಬೆದರಿಕೆ ಇದ್ದು ಆ ಕುಟುಂಬಕ್ಕೆ ಸೂಕ್ತ ಬಂದೋಬಸ್ ಕಲ್ಪಿಸಬೇಕೆಂದು ಈ ಸಂದರ್ಭದಲ್ಲಿ ಶಿವಕುಮಾರ್ ಸರ್ಕಾರವನ್ನು ಅಗ್ರಹಿಸಿದರು.
 ಈ ಸಂದರ್ಭದಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ ಆನಂದ್ ಕುಮಾರ್ ಕುಡುತಿನಿ, ಜಿಲ್ಲಾ ಉಪಾಧ್ಯಕ್ಷ ಸಿ ಹನುಮಂತ ಕೊಳಗಲ್ಲು, ಖಜಾಂಚಿ ದಿವಾಕರ ಬಾಬು ಸೇರಿದಂತೆ ಇತರ ಹಲವಾರು ಜನ ವೇದಿಕೆಯ ಕಾರ್ಯಕರ್ತರಿದ್ದರು.
WhatsApp Group Join Now
Telegram Group Join Now
Share This Article