ಶೌರ್ಯ, ಸ್ವಾಭಿಮಾನ ಮತ್ತು ರಾಷ್ಟ್ರಭಕ್ತಿಗೆ ಶಿವಾಜಿ ಮಹಾರಾಜರು ಎಂದಿಗೂ ಆದರ್ಶ: ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧಿಯಾ

Hasiru Kranti
ಶೌರ್ಯ, ಸ್ವಾಭಿಮಾನ ಮತ್ತು ರಾಷ್ಟ್ರಭಕ್ತಿಗೆ ಶಿವಾಜಿ ಮಹಾರಾಜರು ಎಂದಿಗೂ ಆದರ್ಶ: ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧಿಯಾ
WhatsApp Group Join Now
Telegram Group Join Now
ಅಥಣಿ: ಭಾರತದ ಇತಿಹಾಸದಲ್ಲಿ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನಕ್ಕೆ ಪ್ರತೀಕವಾಗಿ ಬೆಳಗಿದ ಮಹಾನ್ ಯೋಧ ಛತ್ರಪತಿ ಶಿವಾಜಿ ಮಹಾರಾಜರು. ಅವರ ಆದರ್ಶಗಳು, ಆಡಳಿತದ ನೀತಿಗಳು ಹಾಗೂ ದೇಶಭಕ್ತಿಯ ಚಿಂತನೆಗಳು ಇಂದಿಗೂ ಯುವ ಪೀಳಿಗೆಯನ್ನು ಪ್ರೇರೇಪಿಸುತ್ತಿವೆ. ಇಂತಹ ಮಹಾನ್ ನಾಯಕನ ಪ್ರತಿಮೆಯ ಉದ್ಘಾಟನೆ ಕಾರ್ಯಕ್ರಮವು ಕೇವಲ ಒಂದು ಶಿಲ್ಪ ಅನಾವರಣವಲ್ಲ, ಅದು ಒಂದು ಯುಗದ ಸ್ಮರಣೆ ಹಾಗೂ ಆದರ್ಶಗಳ ಪುನರುಚ್ಚಾರಣೆಯಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದರು
ಅಥಣಿ ನಗದ ಶಿವಾಜಿ ವೃತ್ತದಲ್ಲಿ ರವಿವಾರ ಶಿವಪ್ರತಿಷ್ಠಾನ ಹಿಂದೂಸ್ತಾನ ಘಟಕ ಅಥಣಿ ಹಾಗೂ ಅಥಣಿ ತಾಲೂಕು ಏಕಛತ್ರ ಮರಾಠಾ ಸಮಾಜ ಸಂಘ ಇವರ ಸಂಯುಕ್ತಾರ್ಶರಯದಲ್ಲಿ ನಡೆದ ದ್ವಜಸ್ಥಂಬ ಪೂಜೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯನ್ನು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಶಿವಾಜಿ ವಂಶಸ್ಥ ಲೋಕಸಭಾ ಸದಸ್ಯ ಶಾಹು ಛತ್ರಪತಿ ಮಹಾರಾಜ, ಶಿವಪ್ರತಿಷ್ಠಾನ ಹಿಂದೂಸ್ತಾನ ಸಂಸ್ಥಾಪಕ ಸಂಭಾಜಿ ವಿನಾಯಕ ಭೀಡೆ ಗುರುಜಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಕಾರ್ಯಕ್ರಮದ ಅಧ್ಯಕ್ಷ ಶ್ರೀಮಂತ ಪಾಟೀಲ ಅವರ ಸಮ್ಮುಖದಲ್ಲಿ ಮೂರ್ತಿ ಅನಾವರಣ ಕಾರ್ಯಕ್ರಮ ವಿಜೃಂಭನೆಯ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಜನಪ್ರತಿನಿಧಿಗಳು, ಇತಿಹಾಸ ಪಂಡಿತರು ಮತ್ತು ಅಪಾರ ಸಂಖ್ಯೆಯ ಜನತೆ ಭಾಗವಹಿಸಿ ಕಾರ್ಯಕ್ರಮಕ್ಕೆ ಗೌರವ ನೀಡಿದರು. ವಿಧಿವಿಧಾನಗಳೊಂದಿಗೆ ಪ್ರತಿಮೆಯನ್ನು ಉದ್ಘಾಟಿಸಲಾಗಿದ್ದು, ಶಿವಾಜಿ ಮಹಾರಾಜರ ಶೌರ್ಯಗಾಥೆಯನ್ನು ನೆನಪಿಸುವ ಘೋಷಣೆಗಳು ವಾತಾವರಣವನ್ನು ರಾಷ್ಟ್ರಭಕ್ತಿಯಿಂದ ತುಂಬಿಸಿದವು. ನಂತರ ಭೋಜರಾಜ ಕ್ರಿಡಾಂಗಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟçದ ಸಚಿವರು, ಸಂಸದರು, ಶಾಶಕರು ಹಾಗೂ ಸಮಜಾದ ಮುಖಂಡರು ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಶಿವಾಜಿ ಮಹಾರಾಜರು ನ್ಯಾಯಯುತ ಆಡಳಿತ, ಪ್ರಜಾಕಲ್ಯಾಣ ಮತ್ತು ಧರ್ಮ ನಿರಪೇಕ್ಷತೆಯ ಪ್ರತೀಕವಾಗಿದ್ದರು. ಅವರು ಕಟ್ಟಿದ ಸ್ವರಾಜ್ಯ ಕೇವಲ ಒಂದು ಸಾಮ್ರಾಜ್ಯವಲ್ಲ, ಅದು ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಯ ಸಂಕೇತವಾಗಿತ್ತು. ಮಹಿಳೆಯರ ಗೌರವ, ರೈತರ ರಕ್ಷಣೆ ಮತ್ತು ಧರ್ಮ ಸಹಿಷ್ಣುತೆಯನ್ನು ಅವರು ತಮ್ಮ ಆಡಳಿತದ ಮೂಲ ತತ್ವಗಳಾಗಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು
ನಂತರ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು ಶಿವಾಜಿ ಮಹಾರಾಜರ ಜೀವನದಿಂದ ನಾವು ಶಿಸ್ತು, ಧೈರ್ಯ ಮತ್ತು ದೇಶ ಸೇವೆಯ ಪಾಠಗಳನ್ನು ಕಲಿಯಬೇಕೆಂದು ಕರೆ ನೀಡಿದರು. ಯುವಜನತೆಗೆ ಇದು ಪ್ರೇರಣೆಯ ಕೇಂದ್ರವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಈ ಪ್ರತಿಮೆ ಮುಂದಿನ ಪೀಳಿಗೆಗೆ ಶಿವಾಜಿ ಮಹಾರಾಜರ ಆದರ್ಶಗಳನ್ನು ನೆನಪಿಸುವ ಸ್ಮಾರಕವಾಗಿ ನಿಲ್ಲಲಿ. ಅವರ ಜೀವನ ಮತ್ತು ಸಾಧನೆಗಳು ನಮ್ಮೆಲ್ಲರಲ್ಲೂ ಸ್ವಾಭಿಮಾನ, ಶೌರ್ಯ ಮತ್ತು ರಾಷ್ಟ್ರಭಕ್ತಿಯ ಆದರ್ಶಗಳು ಜಗತ್ತಿಗೆ ಇಂದಿಗೂ ಮಾದರಿಯಾಗಿವೆ ಎಂದು ಹೇಳಿದರು.
ಇದೆ ವೇದಿಕೆಯಲ್ಲಿ ವಿಜಯಪೂರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ ಶಿವಾಜಿ ಮಹಾರಾಜರು ಅಂದಿನ ಕಾಲದಲ್ಲಿ ಹಿಂದೂ ಸಮಾಜ ರಕ್ಷಣೆ ಮಾಡದೆ ಹೋಗಿದ್ದರೆ ಇಂದು ನಾವೇಲ್ಲರು ಅನಿವಾರ್ಯವಾಗಿ ಬೇರೆ ಧರ್ಮವನ್ನು ಅನುಸರಿಸಬೇಕಾಗಿತ್ತು. ಶಿವಾಜಿ ಮಹಾರಾಜರು ನಮ್ಮೆಲ್ಲರಿಗೂ ಆದರ್ಶ ಅವರ ಶೌರ್ಯಗಳ ಗಾಥೆಯನ್ನು ಹೇಳಲು ಪದಗಳು ಸಾಲುವದಿಲ್ಲ, ಅವರ ಜೀವನ ಶೈಲಿಯನ್ನು ಯುವ ಜನರು ಅನುಕರಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ ಲಾಡ್, ಮಾಜಿ ಸಚಿವ ಪಿ ಜಿ ಆರ್ ಸಿಂಧಿಯಾ, ಮರಾಠಾ ಜಗದ್ಗುರು ಮಂಜೂನಾಥ ಭಾರತಿ ಸ್ವಾಮೀಜಿ ಮಾತನಾಡಿದರು
ಈ ವೇಳೆ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೇಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ಕವಲಗುಡ್ಡದ ಸಿದ್ದಯೊಗಿ ಅಮರೇಶ್ವರ ಮಹಾರಾಜರು, ಕಕಮರಿಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಶಾಸಕರಾದ ರಮೇಶ ಜಾರಕಿಹೊಳಿ, ವಿಕ್ರಮಸಿಂಗ ಸಾವಂತ, ಸಮಾಧಾನ ಅವತಾಡೆ, ಮಾರುತಿರಾವ ಮೂಳೆ, ಮಾಜಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ವಿಧನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಮುಖಂಡರಾದ ದಿಗ್ವಿಜಯ ಪವಾರದೇಸಾಯಿ, ಅರವಿಂದ ದೇಶಪಾಂಡೆ, ಗಜಾನನ ಮಂಗಸೂಳಿ, ರಾವಸಾಹೇಬ ದೇಸಾಯಿ, ವಿನಾಯಕ ದೇಸಾಯಿ, ಬಹು ಜಾಧವ ಸೇರಿದಂತೆ ಹಲವು ಜನ ಶಿವ ಭಕ್ತರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article