ಕಠ್ಮಂಡುವಿನಲ್ಲಿ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನ

Ravi Talawar
ಕಠ್ಮಂಡುವಿನಲ್ಲಿ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನ
WhatsApp Group Join Now
Telegram Group Join Now

ನೇಪಾಳದ ಕಠ್ಮಂಡುವಿನಲ್ಲಿ ಟೇಕ್​ ಆಪ್​ ಆಗುವ ವೇಳೆ 19 ಪ್ರಯಾಣಿಕರಿದ್ದ ಶೌರ್ಯ ವಿಮಾನ ಪತನಗೊಂಡಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ, ಸೂರ್ಯ ಏರ್‌ಲೈನ್ಸ್ ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಖರಾಗೆ ಹಾರುತ್ತಿತ್ತು.

ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರು ಇರಲಿಲ್ಲ, ಆದರೆ ತಾಂತ್ರಿಕ ತಂಡದ 19 ಸದಸ್ಯರು ವಿಮಾನದಲ್ಲಿದ್ದರು. ಸಾವು ನೋವುಗಳ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ.

ಪತನದ ನಂತರ ವಿಮಾನದಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ಹೇಳಿರುವುದಾಗಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಶೌರ್ಯ ಏರ್‌ಲೈನ್ಸ್ ವಿಮಾನ ಟೇಕಾಫ್ ಆಗುವ ವೇಳೆ ಪತನಗೊಂಡಿದೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ ಪೋಖರಾ ವಿಮಾನದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ 19 ಮಂದಿ ಇದ್ದರು ಎಂದು ಟಿಐಎ ವಕ್ತಾರ ಪ್ರೇಮನಾಥ್ ಠಾಕೂರ್ ತಿಳಿಸಿದ್ದಾರೆ. ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

 

WhatsApp Group Join Now
Telegram Group Join Now
Share This Article