ಮಂಗಳೂರು, ಜೂ.01: ಕೇರಳದ ರಾಜರಾಜೇಶ್ವರಿ ದೇವಾಲಯ ಆವರಣದಲ್ಲಿ ನನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಈ ಕುರಿತು ತನಿಖೆ ನಡೆಸಿದ ಕೇರಳ ಸರ್ಕಾರ ತಳಿಪರಂ ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಶತ್ರುಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆಯಾಗಿದೆ.
ಈ ಸಂಬಂಧ ಕೇರಳ ಸರ್ಕಾರ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ಮೂಲಕ ಕಣ್ಣೂರು, ತಳಿಪರಂಬ ಭಾಗದಲ್ಲಿ ವಿಶೇಷ ತನಿಖೆ ನಡೆಸಿದೆ. ಸಮಗ್ರ ತನಿಖೆ ನಡೆಸಿದ ತನಿಖಾ ದಳ ಕೇರಳದ ಡಿಜಿಪಿ ಅವರಿಗೆ ವರದಿ ಸಲ್ಲಿದೆ. ವರದಿಯಲ್ಲಿ ಯಾವುದೇ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ.