ಹುನಗುಂದ: ಗ್ರಾಮ ಪಂಚಾಯತಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಗಳಲ್ಲೀನ ಎಸ್.ಸಿಪಿ ಟಿಎಸ್ಪಿ ಸೇರದಂತೆ ಸಾಮಾನ್ಯ ವರ್ಗಗಳ ಅಭಿವೃದ್ಧಿ ಕಾಮಗಾರಿ ಗಳಿಗೆ ಮೀಸಲಿಟ್ಟ ಅನುದಾನವನ್ನು ಮಾರ್ಚ್ ತಿಂಗಳೊಳಗೆ ಬಳಕೆ ಮಾಡುವ ಮೂಲಕ ಅಭಿವೃದ್ಧಿ ಕಾಮಗಾರಿ ಗಳನ್ನು ಪೂರ್ಣಗೊಳಿಸಿ,ಯಾವುದೇ ಕಾಮಗಾರಿ ಯ ಅನುದಾನ ಲ್ಯಾಪ್ಸ್ ಮಾಡಿದರೇ ಅಂತಹ ಇಲಾಖೆ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವು ದು ಎಂದು ಬಾಗಲಕೋಟಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆ, ಜಲ ಜೀವನ್ ಮಿ?ನ್ ಕಾಮಗಾರಿ, ಅಂಗನವಾಡಿ ಮಕ್ಕಳು ಗರ್ಭಿಣಿಯರು, ಬಾಣಂತಿಯರ ಸೌಲಭ್ಯಗಳನ್ನು ನೀಡುವ ದಾಖಲಾತಿ, ಪಶು ಆಸತ್ರೆ, ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಹುನಗುಂದ ತಾಲೂಕ ಪಂಚಾಯತಿ ಸಭಾಭವನದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ನಿಯಮಾನಸಾರವಾಗಿ ಕ್ರಿಯಾ ಯೋಜನೆ ಮಾಡಿಕೊಂಡಿದ್ದೀರಿ ಅದರ ತಕ್ಕಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಹುನಗುಂದ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಸಹಾಯಕ ನಿರ್ದೇಶಕರು ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ, ಇದ್ದರು.
ಯಾವುದೇ ಕಾಮಗಾರಿ ಯ ಅನುದಾನ ಲ್ಯಾಪ್ಸ್ ಮಾಡಿದರೇ ಮುಲಾಜಿಲ್ಲದೇ ಕ್ರಮ : ಶಶಿಧರ ಕುರೇರ ಖಡಕ್ ಎಚ್ಚರಿಕೆ


