ಶಶಾಂಕ್-ಡಾರ್ಲಿಂಗ್ ಕೃಷ್ಣ  ಚಿತ್ರ ಬ್ರ್ಯಾಟ್ ನಾನೇ ನೀನಂತೆ ಹಾಡು ಬಿಡುಗಡೆ   

Ravi Talawar
ಶಶಾಂಕ್-ಡಾರ್ಲಿಂಗ್ ಕೃಷ್ಣ  ಚಿತ್ರ ಬ್ರ್ಯಾಟ್ ನಾನೇ ನೀನಂತೆ ಹಾಡು ಬಿಡುಗಡೆ   
WhatsApp Group Join Now
Telegram Group Join Now
      ಸದಭಿರುಚಿಯ ಚಿತ್ರಗಳ ನಿರ್ದೇಶಕ ಶಶಾಂಕ್ ನಿರ್ದೇಶನದ, ತಮ್ಮ ನಟನೆಯ ಮೂಲಕ ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ  ‘ಬ್ರ್ಯಾಟ್’ ಚಿತ್ರದ ‘ನಾನೇ ನೀನಂತೆ’ ಹಾಡು  ಬಿಡುಗಡೆಯಾಗಿದೆ.
      ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿದೆ.  ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ  ಹಾಡು ಆನಂದ್ ಆಡಿಯೋ ಮೂಲಕ  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ  ಬಿಡುಗಡೆಯಾಗಿದೆ.
     ಕನ್ನಡ ಹಾಗೂ ತೆಲುಗಿನಲ್ಲಿ ಈ ಹಾಡನ್ನು ಜನಪ್ರಿಯ  ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ.  ಕನ್ನಡದ ಫಿಮೇಲ್ ವರ್ಷನ್ ಸರಿಗಮಪ ಖ್ಯಾತಿಯ ಲಹರಿ ಮಹೇಶ್ ಹಾಡಿದ್ದಾರೆ. ಉಳಿದ ನಾಲ್ಕು ಭಾಷೆಗಳಲ್ಲಿ ಫೀಮೇಲ್ ವರ್ಷನ್ ಸಿರೀಶ ಹಾಡಿದ್ದಾರೆ. ಹಿಂದಿಯಲ್ಲಿ ಮೇಲ್ ವರ್ಷನ್ ನಿಹಾಲ್ ತವ್ರು ಹಾಗೂ ತೆಲುಗು – ತಮಿಳಿನಲ್ಲಿ ಶ್ರೀಕಾಂತ್ ಹರಿಹರನ್ ಹಾಡಿದ್ದಾರೆ.
     ಈ ಹಿಂದೆ ಶಶಾಂಕ್, ಅರ್ಜುನ್ ಜನ್ಯ ಹಾಗೂ  ಸಿದ್ ಶ್ರೀರಾಮ್ ಅವರ ಕಾಂಬಿನೇಶನ್ ನಲ್ಲಿ ಲವ್ 360 ಚಿತ್ರದ ‘ಜಗವೇ ನೀನು ಗೆಳತಿಯೇ’ ಹಾಡು ಭರ್ಜರಿ ಯಶಸ್ಸು ಕಂಡಿತ್ತು‌.      “ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ನಂತರ ನನ್ನ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರ ‘ಬ್ರ್ಯಾಟ್’. ನನ್ನ ಈ ಚಿತ್ರದ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣರಾದ ನಿರ್ದೇಶಕ ಶಶಾಂಕ್ ಹಾಗೂ ತಂಡಕ್ಕೆ ಧನ್ಯವಾದ. ಇಂದು ಬಿಡುಗಡೆಯಾಗಿರುವ ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಿದ್ ಶ್ರೀರಾಮ್ ಹಾಗೂ ಲಹರಿ ಅವರ ಗಾಯನ ಹಾಡಿಗೆ ಪೂರಕವಾಗಿದೆ. ಮುಂದಿನ ತಿಂಗಳು ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಲಿದೆ. ಆ ಹಾಡಂತೂ ನನ್ನ ಮಗಳಿಗೆ ಬಹಳ ಇಷ್ಟ” ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.
     “ನನ್ನ ಹಾಗೂ ಅರ್ಜುನ್ ಜನ್ಯ ಅವರ ಕಾಂಬಿನೇಶನ್ ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಅತೀ ಹೆಚ್ಚು ಜನಪ್ರಿಯವಾಗಿದೆ. ಈಗ ಆ ಸಾಲಿಗೆ ‘ನಾನೇ ನೀನಂತೆ’ ಹಾಡು ಕೂಡ ಸೇರಲಿದೆ. ನನ್ನ ಸಿನಿ ಜರ್ನಿಯಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿಬಂದಿರುವ ಹಾಡಿದು. ಈ ಹಾಡಿನ ಟ್ಯೂನ್  ಅಂತಿಮಗೊಳಿಸಲು ಸುಮಾರು 6 ತಿಂಗಳ ಸಮಯ ಬೇಕಾಯಿತು. ನಿರ್ಮಾಪಕ ಮಂಜುನಾಥ್ ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿದ್ ಶ್ರೀರಾಮ್ ಅವರ ಧ್ವನಿಯಂತೂ ಹೇಳಿ ಮಾಡಿಸಿದ ಹಾಗಿದೆ. ಕನ್ನಡದಲ್ಲಿ ಈ ಹಾಡನ್ನು ನಾನೇ ಬರೆದಿದ್ದೇನೆ. ಆನಂದ್ ಆಡಿಯೋ ಮೂಲಕ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಸಹ ಬಿಡುಗಡೆಯಾಗಲಿದೆ. ಅಂದುಕೊಂಡ ಹಾಗೆ ಆದರೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ” ಎಂದು ನಿರ್ದೇಶಕ ಶಶಾಂಕ್ ತಿಳಿಸಿದರು.
      “ನಮ್ಮ ಮೊದಲ ನಿರ್ಮಾಣದ ಫಸ್ಟ್ ರ‍್ಯಾಂಕ್ ರಾಜು ಚಿತ್ರದ ಗೆಲುವಿಗೆ ನೀವೆಲ್ಲಾ ನೀಡಿದ ಪ್ರೋತ್ಸಾಹವೇ ಕಾರಣ. ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ. ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು  ಸುಮಧುರವಾಗಿದೆ‌. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ” ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.
     “ನಾನು ಕನ್ನಡದವಳು. ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ನನ್ನದು ಮಧ್ಯಮವರ್ಗದ ಹುಡುಗಿ ಪಾತ್ರ. ಚಿತ್ರದಲ್ಲೂ ನನ್ನ ಪಾತ್ರದ ಹೆಸರು ಮನಿಶಾ. ಇಂದು ಬಿಡುಗಡೆಯಾಗಿರುವನಾನೇ ನೀನಂತೆ ನನ್ನ ಇಷ್ಟದ ಹಾಡು” ಎಂದರು ನಾಯಕಿ ಮನಿಶಾ ಕಂದಕೂರ್.   ಗಾಯಕಿ ಲಹರಿ, ಆನಂದ್ ಆಡಿಯೋ ಶ್ಯಾಮ್, ನೃತ್ಯ ನಿರ್ದೇಶಕ‌ ಕಲೈ ಮಾಸ್ಟರ್ ಹಾಗೂ ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ನಾನೇ ನೀನಂತೆ ಹಾಡಿನ ಕುರಿತು ಮಾತನಾಡಿದರು.
WhatsApp Group Join Now
Telegram Group Join Now
Share This Article