ಬಳ್ಳಾರಿ:04. ವಿ.ವೀ.ಸಂಘದ ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ಪಿ.ಜಿ. ವಿದ್ಯಾರ್ಥಿಗಳಿಗೆ ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಾಲ್ಕು ರ್ಯಾಂ ಕ್ ಗಳಿಸಿದ್ದಾರೆ.
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ೨೦೨೪-೨೫ನೇ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯ ಮಟ್ಟದಲ್ಲಿ ರ್ಯಾಂ ಕ್ ಗಳನ್ನು ಗಳಿಸಿದ್ದಾರೆ.

ರಾಹುಲ್ ಡೇವಿಡ್ ಬಿ, ಎಂ.ಟೆಕ್. ಪ್ರೊಡಕ್ಷನ್ ಮ್ಯಾನೇಜ್ಮೆಂಟನಲ್ಲಿ ಪ್ರಥಮ ರ್ಯಾಂಕ್ ಮತ್ತು ಚಿನ್ನದ ಪದಕವನ್ನು ಗಳಿಸಿದ್ದಾರೆ. ಎಂ.ಟೆಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ಟ್ರೀಮ್ ನಲ್ಲಿ ರ್ಯಾಂ ಕ್ ಪಡೆದವರಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಗಿ ಜೈನ್ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದಿದ್ದಾರೆ.
ಬಲರಾಜ್ ಎಲ್.ಡಿ, ಎಂ.ಟೆಕ್. ಪ್ರೊಡಕ್ಷನ್ ಮ್ಯಾನೇಜ್ಮೆಂಟನಲ್ಲಿ ಎರಡನೇ ರ್ಯಾಂ ಕ್ ಪಡೆದಿದ್ದಾರೆ.
ನಿತ್ಯ ಸಂತೋಷಿ ಎಚ್, ಎಂ.ಟೆಕ್. ವಿ.ಎಲ್.ಎಸ್.ಐ ಡಿಜೈನ್ ಆ್ಯಂಡ್ ಎಂಬೆಡೆಡ್ ಸಿಸ್ಟಮ್ ನಲ್ಲಿ ಮೂರನೇ ರ್ಯಾಂ ಕ್ ಪಡೆದಿದ್ದಾರೆ.
ಸುಮಲತಾ, ಎಂ.ಟೆಕ್. ವಿ.ಎಲ್.ಎಸ್.ಐ ಡಿಜೈನ್ ಆ್ಯಂಡ್ ಎಂಬೆಡೆಡ್ ಸಿಸ್ಟಮ್ ನಲ್ಲ್ಲಿ ನಾಲ್ಕನೇ ರ್ಯಾಂ ಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ವಿ.ವೀ.ಸಂಘದ ಅಧ್ಯಕ್ಷರಾದ ಡಾ. ಕಣೇಕಲ್ ಮಹಾಂತೇಶ್; ವಿ.ವೀ.ಸಂಘದ ಉಪಾಧ್ಯಕ್ಷರು ಮತ್ತು ಆರ್.ವೈ.ಎಂ.ಇ.ಸಿ. ಅಧ್ಯಕ್ಷ ಜಾನೆÀಕುಂಟೆ ಬಸವರಾಜ್; ವಿ.ವೀ.ಸಂಘದ ಕಾರ್ಯದರ್ಶಿ ಡಾ. ಅರವಿಂದ್ ಪಟೇಲ್; ವಿ.ವೀ.ಸಂಘದ ಸಹ ಕಾರ್ಯದರ್ಶಿ ಯಾಲ್ಪಿ ಮೇಟಿ ಪಂಪನಗೌಡ; ವಿ.ವೀ.ಸಂಘದ ಖಜಾಂಚಿ ಬೈಲುವದ್ದಿಗೇರಿ ಯೆರ್ರಿಸ್ವಾಮಿ; ಆರ್.ವೈ.ಎಂ.ಇ.ಸಿ. ಆಡಳಿತ ಮಂಡಳಿಯ ಸದಸ್ಯ ಪ್ರಭುಸ್ವಾಮಿ ಎಸ್.ಎಂ. ಮತ್ತು ಬಾಡದ ಪ್ರಕಾಶ್ ಶುಭಹಾರೈಸಿದರು.
ಪ್ರಾಂಶುಪಾಲ ಡಾ. ರಾಜಶೇಖರನ್ ಷಣ್ಮುಗಂ, ಉಪ ಪ್ರಾಂಶುಪಾಲ ಡಾ. ಸವಿತ ಸೊನೊಳಿ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ರ್ಯಾಂ ಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


