ಬೆಳಗಾವಿ : – ಶರಣರು ವಚನಗಳಲ್ಲಿ ಬ್ರಹ್ಮಾಂಡದ ಕುರಿತು ಮಾತನಾಡಿದ್ದಾರೆ.,ಬಯಲು ಎಂಬ ಶಬ್ಧದ ಕುರಿತು ಚರ್ಚಿಸಿದ್ದಾರೆ. ಶರಣರ ಇಪ್ಪತ್ತೆರಡು ಸಾವಿರ ವಚನಗಳಲ್ಲಿ ೨೮೪ ವಚನಗಳಲ್ಲಿ “ಬಯಲು” ಮತ್ತು ಬ್ರಹ್ಮಾಂಡದ ಕುರಿತು ಉಲ್ಲೇಖಿಸಲಾಗಿದೆ. ಅರವತ್ನಾಲ್ಕು ಶರಣರು ವೈಜ್ಞಾನಿಕ ತಳಹದಿಯ ಮೇಲೆ ವಚನಗಳ ರಚನೆ ಮಾಡಿದ್ದು, ನಮಗೆ ತಿಳಿದು ಬರುತ್ತದೆ ಎಂದು ಡಾ. ಗೀತಾ ಸುರೇಶ ದೇಯನ್ನವರ ಹೇಳಿದರು.

ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅವರು ಆಯೋಜಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ” ಶರಣರ ವಚನಗಳಲ್ಲಿ ವೈಜ್ಞಾನಿಕ ಪರಿಕಲ್ಪನೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿದ ಉಪನ್ಯಾಸಕರು ಮಹಾಂತೇಶ ನಗರ ಬಿ.ಎಡ್.ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಗೀತಾ ಸುರೇಶ ದೇಯನ್ನವರ ಮಾನವನ ಸರ್ವ ಸಮಸ್ಯೆಗಳಿಗೆ,,ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವದು,ಹಾಗೂ ಗೊತ್ತಿಲ್ಲದ ವಿಷಯಗಳ ಸಂಶೋದನೆ ಮಾಡುವದೇ ವಿಜ್ಞಾನ. ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರ ವಚನಗಳನ್ನು ಅಧ್ಯಯನ ಮಾಡಲಾಗಿ , ಮಾನವನಾಗಿ ಹುಟ್ಟಿದ ಮೇಲೆ “ನಾನು ಯಾರು ? ನಾನೇಕೆ ಹುಟ್ಟಿ ಬಂದಿದ್ದೇನೆ? ನನ್ನ ಕರ್ಮವೆನು? ಎಂಬುದ ಅರಿತು ಮಾನವನಿಂದ ಹೇಗೆ ಜಂಗಮವಾಗಬೇಕೆಂಬ ಆಶಯವಿದೆ.ಆದರೆ ನಾವು ಯಾವಾಗ ಜಂಗಮರಾಗುವದು? ( ಸರ್ವರೂ ಒಪ್ಪುವ ಸುಗುಣಗಳ ಅಳವಡಿಸಿಕೊಂಡು ಆದರ್ಶದ ಬದುಕು ಕಟ್ಟಿಕೊಂಡ ವ್ಯಕ್ತಿಯೇಜಂಗಮ.) ಎಂಬ ಪ್ರಶ್ನೆಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ವಿಜ್ಞಾನಿಗಳು ಗೃಹಗಳ ಕುರಿತು ಸಂಶೋದನೆ ಮಾಡಿ ಜಗತ್ತಿಗೆ ಪರಿಚಯಿಸಿದರು. ಆದರೆ ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿ ತಮ್ಮ ವಚನಗಳಲ್ಲಿ ಬ್ರಹ್ಮಾಂಡದ ಕುರಿತು ವಿವರಿಸಿದ್ದನ್ನು ನೋಡಬಹುದಾಗಿದೆ. ೧೯೪೮ ರಲ್ಲಿ ವಿಜ್ಞಾನಿಗಳು ಜಾರ್ಜ ಮತ್ತು ಹರ್ಮನ್ ಅವರು ವಿಶ್ವವಿಕಾಸದ ( Big bang theory) ಸಿದ್ಧಾಂತದ ಕುರಿತು ಪ್ರಯೋಗ ಮಾಡಿದ್ದು ಕಂಡುಬರುತ್ತದೆ. ಆದರೆ ಬಿಗ್ ಬ್ಯಾಂಗ (Big bang theory ) ಸಿದ್ಧಾಂತದ ಕುರಿತು ಹನ್ನೆರಡನೆಯ ಶತಮಾನದಲ್ಲಿ ನಮ್ಮ ಶರಣರು ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಸಮಾರಂಭದ ಸಾನಿದ್ಯವಹಿಸಿದ್ದ ಪ.ಪೂ.ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರ, ಅವರು ವಚನಗಳ ಆಶಯವನ್ನು ತಾಯಂದಿರು ತಮ್ಮ ಮಕ್ಕಳಿಗೆ ತಿಳಿಸಬೇಕಾದ ಅವಶ್ಯಕತೆ ಇದೆ. ಯಾವತ್ತೂ ತಮ್ಮ ಮಕ್ಕಳನ್ನು ಇಂತಹ ಕಾರ್ಯಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕೆಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಅದ್ಯಕ್ಷರಾದ ಶರಣ, ಬಸವರಾಜ ರೊಟ್ಟಿ ಅವರು ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತ, ಸಂಘಟನೆ ಕುರಿತು ವಿವರಿಸಿದರು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶರಣ ಸಂಸ್ಕೃತಿಯ ಮೇಲೆ ವ್ಯವಸ್ಥಿತ ದಾಳಿ ಮಾಡುತ್ತಿರುವದು ಖಂಡನೀಯ ಅಂತಾ ಹೇಳಿದರು.ಶರಣ, ಮಹಾದೇವ ಹಾಗೂ ಸುನಂದಾ ಕೋರಿ ದಂಪತಿಗಳು ಷಟ್ ಸ್ಥಲ ಧ್ವಜಾರೋಹಣ ಮಾಡಿದರು. ಶರಣ ಈರಣ್ಣ ಚಿನಗುಡಿ ಶಿಕ್ಷಕರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.ಶರಣೆ ಗಾಯತ್ರಿ ಸತೀಶ ಕೆಂಪಣ್ಣವರ ವಂದನಾರ್ಪಣೆ ಮಾಡಿದರು. ಶರಣೆ,ಪ್ರೀತಿ ಗುರಯ್ಯ ಮಠದ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಅಶೋಕ ಮಳಗಲಿ, ಎಸ್.ಜಿ ಸಿದ್ನಾಳ,ಚಂದ್ರಪ್ಪ ಬೂದಿಹಾಳ,ಚಂದ್ರು ನಾವಲಗಟ್ಟಿ,ಸುಜಾತಾ ಮತ್ತಿಕಟ್ಟಿ,ರತ್ನಾ ಬೆಣಚಮರ್ಡಿ,ಭಾಗ್ಶಶ್ರೀ ಬೆಣಚಮರ್ಡಿ ಶೋಭಾ ಶಿವಳ್ಳಿ, ಕಾವೇರಿ ಕಿಲಾರಿ,ಕೆಂಪಣ್ಣ ರಾಮಾಪೂರಿ ದಂಪತಿ,ಅನಷಾ ಬಶೆಟ್ಟಿ,ಸುಲೋಚನಾ ವಸ್ತ್ರದ,ವಿರೂಪಾಕ್ಷಿ ದೊಡಮನಿ, ಮೋಹನ ಗುಂಡ್ಲೂರ,ಪ್ರವೀಣ ಚಿಕಲಿ,ಮುರಿಗೆಪ್ಪ ಬಾಳಿ, ಶಿವಪುತ್ರಯ್ಯ ಪೂಜಾರ,ರುದ್ರಗೌಡರು ಅಲ್ಲದೇ ವಿವಿದ ಬಡಾವಣೆಯ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.