ಶರಣಪ್ಪ ಮೇಳಕುಂದಿ ಆದರ್ಶ ಜೀವನ ಎಲ್ಲರಿಗೂ ಮಾದರಿ: ಕಾಶೀನಾಥ ಬಿರಾದಾರ 

Ravi Talawar
ಶರಣಪ್ಪ ಮೇಳಕುಂದಿ ಆದರ್ಶ ಜೀವನ ಎಲ್ಲರಿಗೂ ಮಾದರಿ: ಕಾಶೀನಾಥ ಬಿರಾದಾರ 
WhatsApp Group Join Now
Telegram Group Join Now

 

ಬೈಲಹೊಂಗಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವದು ಶ್ರಮದ ಕಾರ್ಯವಾಗಿದ್ದು ಕಡಿಮೆ ಸಂಬಳ, ಅಧಿಕ ದುಡಿಮೆ ಕರ್ತವ್ಯ ಅಗಿದ್ದು ಈ ಸಂಸ್ಥೆಯಲ್ಲಿ ಕಳೆದ 39 ವರ್ಷ ನಿರ್ವಾಹಕ , ಸಾರಿಗೆ ನಿಯಂತ್ರಕರಾಗಿ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿ ಅಪಾರ ಸೇವೆ ಸಲ್ಲಿಸಿ ಸಾರಿಗೆ ನೌಕರರಿಗೆ ಶರಣಪ್ಪ ಅಣ್ಣನವರು ಆದರ್ಶಪ್ರಾಯರಾಗಿದ್ದಾರೆ ಎಂದು ಶ್ರೀ ಖಾಸಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಾಶೀನಾಥ ಬಿರಾದಾರ ಹೇಳಿದರು.

ಅವರು ನಗರ ಸಾರಿಗೆ ಘಟಕದಲ್ಲಿ ಸಾರಿಗೆ ಸಂಸ್ಥೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಶರಣಪ್ಪ ಎಸ್ ಮೇಳಕುಂದಿ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಬೈಲಹೊಂಗಲ ಸಾರಿಗೆ ಘಟಕ ವ್ಯವಸ್ಥಾಪಕ ವಿ ಜಿ. ಹೊಸಮನಿ ಮಾತನಾಡಿ ಶರಣಪ್ಪ ಅವರ ವ್ಯಕ್ತಿತ್ವ, ಹಸನ್ಮುಖಿ ಜೀವನ ಆದರ್ಶಮಯವಾಗಿದ್ದು, ಶಕ್ತಿ ಯೋಜನೆಯ ಕಾಲದಲ್ಲಿ ಸ್ವಯಂದಿಂದ ಕೆಲಸ ಮಾಡಿ ಜನರಿಗೆ ಒಳೆಯ ಸೇವೆ ಒದಗಿಸಿ ಭೇಷ್ ಅನಿಸಿಕೊಂಡು ಸಮಾಜದಲ್ಲಿ ಮಕ್ಕಳನ್ನು ಉನ್ನತವಾಗಿ ಬೆಳೆಸಿದ್ದಾರೆ ಎಂದರು

 

ಶರಣಪ್ಪ ಮೇಳಕುಂದಿ ಮಾತನಾಡಿ ನನ್ನ ಯಶಸ್ವಿ ಸೇವೆಗೆ ಪತ್ನಿ ಮಧುಮತಿ ಅವರ ಸಹಕಾರ ಕಾರಣ ಎಂದರು.ಪತ್ರಕರ್ತ ಮಹಾಂತೇಶ ರಾಜಗೋಳಿ, ರಾಜಕುಮಾರ ಬಿರಾದಾರ,ವಾಯ ಎಸ್ ಗುಡೆಪ್ಪಗೋಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎ ಟಿ ಎಸ್ ಮಲ್ಲಪ್ಪ ಕೆಂಚಣ್ಣವರ, ಎ ಟಿ ಎಸ್ ಬಿ ಜಿ. ಪುಡಕಲಕಟ್ಟಿ, ನಿವೃತ್ತ ಎ ಟಿ ಐ ವಿ ಡಿ ಹುದ್ದಾರ,ನಿವೃತ್ತ ಸಂಚಾರಿ ನಿಯಂತ್ರಕ ಶಿವಲಿಂಗಪ್ಪ ಮಾಳಣ್ಣವರ, ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯನಿರ್ವಾಹಕ ಯೋಗೀಶ್ ಬಿರಾದಾರ, ಕಲ್ಲಪ್ಪ ಮುರ್ಕಿಬಾವಿ,ಕಾಂಗ್ರೆಸ್ ಮುಖಂಡ ಈರಪ್ಪ ಜಿರಲಿ ಸೇರಿದಂತೆ ಶರಣಪ್ಪ ಮೇಳಕುಂದಿ ಕುಟುಂಬದ ಸದಸ್ಯರು, ಸಾರಿಗೆ ಘಟಕದ ಸಿಬ್ಬಂದಿ, ನಿವೃತ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article