ರಜೆಯ ನಂತರ ಶಾಲಾ ತರಗತಿ ಪ್ರಾರಂಭೋತ್ಸವ ; ಶಾರದಹಳ್ಳಿ

Ravi Talawar
ರಜೆಯ ನಂತರ ಶಾಲಾ ತರಗತಿ ಪ್ರಾರಂಭೋತ್ಸವ ; ಶಾರದಹಳ್ಳಿ
WhatsApp Group Join Now
Telegram Group Join Now
ಯಾದಗಿರಿ,31: ಜಿಲ್ಲೆಯ ಶಹಾಪೂರ ತಾಲೂಕಿನ ಶಾರದಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ರಜೆಯು ಮುಗಿದ ಹಿನ್ನಲೆಯಲ್ಲಿ ಶಾಲಾ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಳಿರು ತೋರಣಗಳಿಂದ ಅಲಂಕೃತವಾಗಿದ್ದ ಶಾಲೆಗೆ ವಿದ್ಯಾರ್ಥಿಗಳನ್ನು ಹೂ ನೀಡುವುದರ ಮೂಲಕ ಸಿಹಿ ಹಂಚಿ ಶಾಲಾ ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕಿ ಹಾಗೂ ಅತಿಥಿಗಳು ಸ್ವಾಗತಿಸಿದರು.
ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಷಣ್ಮುಖಯ್ಯ ಹಿರೇಮಠ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಪ್ಪ ಸಗರ, ಅತಿಥಿಗಳಾಗಿ ಆಗಮಿಸಿದ್ದಂಥ ಶ್ರೀಶಂಕ್ರಪ ವಿ. ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂತೋಷ ಎಮ್ ಆಚಾರ್ಯ ಶಾರದಹಳ್ಳಿ, ಶಾಲಾ ಶಿಕ್ಷಕಿಯರಾದ ಅನುರಾಧ ಆದ್ವಾನಿ, ಪ್ರಭಾವತಿ ಮೆಣಸನಿಗಿ, ಶಿಕ್ಷಕಿ ಭಾರತಿ, ಶಿಕ್ಷಕಿ ಸೌಭಾಗ್ಯ, ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article