ನಾಳೆ ನಡೆಯುವ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಶರಭಯ್ಯ ಸ್ವಾಮಿಜಿ ಭಾಗಿ

Pratibha Boi
ನಾಳೆ ನಡೆಯುವ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಶರಭಯ್ಯ ಸ್ವಾಮಿಜಿ ಭಾಗಿ
WhatsApp Group Join Now
Telegram Group Join Now

ವಿಜಯಪುರ :ಡಿ.13, ಶ್ರೀ ಆದಿ ಜಗದ್ಗುರು ರೇವಣಸಿದ್ಧೇಶ್ವರ ಜನ್ಮ ಕರ್ಮ ಐಕ್ಯ ಭೂಮಿ ತೀರ್ಥ ಕೇತ್ರಗಳ ಮೂಲ ಗುರು ಪೀಠ ಚಾರಿಟೇಬಲ್ ಟ್ರಸ್ಟ್ ಸರೂರನ ಅಧ್ಯಕ್ಷರಾದ ಶರಭಯ್ಯ ಸ್ವಾಮಿಜಿಯವರು ಡಿ. ೧೫ ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಕುರುಬ ಸಮಾಜದ ಪರಿಶಿಷ್ಟ ಪಂಗಡದ ವಿಚಾರವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಶ್ರೀ ರೇವಣಸಿದ್ಧೇಶ್ವರ ಗುರುಪೀಠದ ಗುರುಗಳು ಪ.ಪೂ. ಶ್ರೀ ಶರಭಯ್ಯ ಸರೂರು ಶ್ರೀಗಳು ಈ ಹಿಂದೆ ಸುಮಾರು ಹತ್ತಾರು ವರ್ಷಗಳಿಂದ ಎಸ್.ಟಿ. ಮೀಸಲಾತಿ ಪ್ರತಿಯೊಂದು ಹೋರಾಟದಲ್ಲಿ ಭಾಗವಹಿಸಿದ್ದು, ಈ ಹೋರಾಟದಲ್ಲಿಯೂ ಭಾಗವಹಿಸುತ್ತಿದ್ದೇನೆ. ಇಡೀ ರಾಜ್ಯದ್ಯಂತ ಇರುವ ಕುರುಬ ಸಮಾಜದ ಪ್ರತಿಯೊಬ್ಬರು ಈ ಹೋರಾಟದಲ್ಲಿ ಭಾಗವಹಿಸಬೇಕು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಪ್ರಕಟಣೆಯಲ್ಲಿ ಕೋರಿದ್ದಾರೆ.

WhatsApp Group Join Now
Telegram Group Join Now
Share This Article