ಬೆಂಗಳೂರು, 29: ಸ್ಥಿತಪ್ರಜ್ಞ ಸದ್ಗುರು ಶಾಂತಾನಂದ ಮಹಾಸ್ವಾಮಿಯ ೫೪ನೇ ಪುಣ್ಯಾರಾಧನೆ ಹಾಗೂ ೨೦೨ನೇ ಸತ್ಸಂಗ ಸಮ್ಮೇಳ ಮೇ.೩೧ರಿಂದ ಜೂನ್೨ ರವರೆಗೆ ಬೆಂಗಳೂರಿನ ಮೈಸೂರು ರಸ್ತೆ ಬದಿಯಲ್ಲಿರುವ ಶ್ರೀ ಆರೂಢ ಜ್ಞಾನ ಮಂದಿರ ಶ್ರೀ ಸಿದ್ಧಾರೂಢ ಆಶ್ರಮದಲ್ಲಿ ನಡೆಯಲಿದೆ.
ಬೈಲಹೊಂಗಲ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿದಿನ ಬೆಳಿಗ್ಗೆ ಸಿದ್ಧಾರೂಢ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ಭಗವದೀತೆ ಪಾರಾಯಣ, ಮಹಾತ್ಮರಿಂದ ಪ್ರವಚನ ನಡೆಯಲಿದೆ. ದಿನವೂ ಬೆಳಿಗ್ಗೆ ಮತ್ತು ಸಂಜೆಗೆ ಪಂಡಿತ ಬಸವರಾಜ ಮುಗಳಖೋಡ ಹಾಗೂ ಸಂಗಡಿಗರು, ಪಂಡಿತ ರವೀಂದ್ರ ಸೋರಗಾಂವಿ ಹಾಗೂ ಸಂಗಡಿಗರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ವಿಜಯಪುರದ ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮಿಗಳು, ಬೆಂಗಳೂರಿನ ಓಂಕಾರ ಆಶ್ರಮ ಸಂಸ್ಥಾನದ ಡಾ. ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಮಧುಸೂದನಾಚಂದಪುರಿಗಳು ಸೇರಿದಂತೆ ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು ಅತಿಥಿ ಶ್ರೀಗಳಾಗಿ ಭಾಗವಹಿಸಲಿದ್ದಾರೆ. ನಾಡಿನ ವಿವಿಧ ಕಡೆಗಳಿಂದ ಬರುವ ಮಠದ ಭಕ್ತರು ತುಲಾಭಾರ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. 10ಕ್ಕೂ ಹೆಚ್ಚು ಕುಟುಂಬಗಳು ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುಣ್ಯಾರಾಧನೆ ಹಾಗೂ ಸತ್ಸಂಗ ಸಮ್ಮೇಳನದಲ್ಲಿ ದಿನವೂ ಭಕ್ತರಿಗಾಗಿ ವಿಶೇಷ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿದೆ. ಭಕ್ತ ಕುಟುಂಬಗಳು ಪ್ರಸಾದಕ್ಕಾಗಿ ದಾನಿಗಳಾಗಿ ಆರೂಢರ ಕೃಪೆಗೆ ಪಾತ್ರರಾಗಿದ್ದಾರೆ. ಸಮ್ಮೇಳನಕ್ಕೆ ಎಲ್ಲ ಭಕ್ತವೃಂದ ಆಗಮಿಸಿ ಪುನೀತರಾಗಬೇಕು ಎಂದು ಶ್ರೀ ಸಿದ್ದಾರೂಢ ಆಶ್ರಮದ ಸಕಲ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.