ನವದೆಹಲಿ: ಬಿಜೆಪಿ ಹಿರಿಯ ಮುಖಂಡರಾದ ಶಂಕರ್ ಗೌಡ ಪಾಟೀಲ ಇವರು ಕೇಂದ್ರ ಸರ್ಕಾರದ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ನವದೆಹಲಿಯ ಅವರ ಕಚೇರಿಯಲ್ಲಿ ಭೇಟಿಯಾಗಿ ಸನ್ಮಾನಿಸಿದರು.
ಪ್ರಸಕ್ತ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ವಂದೇ ಭಾರತ ಎಕ್ಸ್ಪ್ರೆಸ್ ಬೆಂಗಳೂರು ಬೆಳಗಾವಿ ವರಗೆ ವಿಸ್ತರಿಸಲು, ಮತ್ತು ಬೆಳಗಾವಿ ಮೂರನೇ ಗೇಟ್ ಹತ್ತಿರ ಓವರ್ ಬ್ರಿಡ್ಜ್ ಪೂರ್ಣಪ್ರಮಾಣ ಕಾಮಗಾರಿ ಆರಂಭಿಸಲು, ಹಾಗೂ ಬೆಳಗಾವಿ ಕಿತ್ತೂರು, ಧಾರವಾಡ ರೈಲು ಮಾರ್ಗ ಯೋಜನೆ ಜಾರಿ ಅನುಷ್ಠಾನಕ್ಕೆ ಶೀಘ್ರ ಚಾಲನೆ ನೀಡಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಸಂಸದ ಕ್ಯಾಪ್ಟನ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.