ಕರ್ನಾಟಕದ ಬಹುತೇಕ ಆಣೆಕಟ್ಟುಗಳ ನಿರ್ಮಾಪಕ ಎಸ್.ಜಿ.ಬಾಳೇಕುಂದ್ರಿ

Ravi Talawar
ಕರ್ನಾಟಕದ ಬಹುತೇಕ ಆಣೆಕಟ್ಟುಗಳ ನಿರ್ಮಾಪಕ ಎಸ್.ಜಿ.ಬಾಳೇಕುಂದ್ರಿ
WhatsApp Group Join Now
Telegram Group Join Now

ಬೆಳಗಾವಿ,06: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ಕ.ಸಾ.ಪ ೧೧೦ನೇ ಸಂಸ್ಥಾಪನಾ ದಿನಾಚರಣೆಯ ಹಾಗೂ ಕರ್ನಾಟಕದ ನೀರಾವರಿ ತಜ್ಞ ಇಂಜನೀಯರ್ ಎಸ್.ಜಿ.ಬಾಳೇಕುಂದ್ರಿ ಜನ್ಮ ದಿನದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಹಾಗೂ ಕನ್ನಡ ಕ್ಷೇಮಾಭಿವೃದ್ಧಿ ಸಂಯುಕ್ತ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ರವಿವಾರ ಸ್ಥಳ: ಕನ್ನಡ ಭವನದಲ್ಲಿ ಜರುಗಿತು.

ನಿವೃತ್ತ ನ್ಯಾಯಾಧೀಶ ಉಲ್ಲಾಸ ಬಾಳೇಕುಂದ್ರಿ, ಇಂಜನೀಯರ್ ಎಸ್.ಜಿ.ಬಾಳೇಕುಂದ್ರಿ ಅವರ ಬದುಕು ಬರಹ ಕುರಿತು ಮಾತನಾಡಿ, ಆಲಮಟ್ಟಿ ಡ್ಯಾಂ ೧೬೫ಕೋಟಿ ವೆಚ್ಚ ಬಚ್ಚಾವತ್ ಕಮೀಟಿ ಶಿಫಾರಸ್ಸು ಮಾಡಿದರು. ೧೯೭೭-೮೮ ರ ಸಾಲಿನಲ್ಲಿ ಕಾಡಾ ನಿರ್ದೇಶಕರಾಗಿ ನಿವೃತ್ತರಾದರು. ಬೆಳಗಾವಿ ಜಿಲ್ಲೆಯ ಹಲವು ಸೇತುವೆ ನಿರ್ಮಾಣ ಕಾರ್ಯ ಭರದಿಂದ ನಿರ್ಮಾಣ ಕೈಗೊಂಡಿದ್ದರು. ಉತ್ತರ ಕರ್ನಾಟಕದ ಬಹುತೇಕ ನೀರಾವರಿ ಒದಗಿಸುವ ಹಿಡಕಲ್ ಡ್ಯಾಂ, ಆಲಮಟ್ಟಿ ಡ್ಯಾಂ, ನವಿಲು ತೀರ್ಥ ಡ್ಯಾಂ, ನಾರಾಯಣಪುರ ಆಣೆಕಟ್ಟು ನಿರ್ಮಾಣ ಮಾಡುವಲ್ಲಿ ಅವರ ಸೇವೆ ಸ್ಮರಣೀಯ ಎಂದರು.

ಇಂಜನೀಯರ್ ಬಸವರಾಜ ಚೆಟ್ಟರ ಮಾತನಾಡಿ ಎಸ್.ಜಿ.ಬಾಳೇಕುಂದ್ರಿ ಅವರು ನೀರಾವರಿ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಸಿವಿಲ್ ಇಂಜನೀಯರ್ ಆಗಿ ಉತ್ತರ ಕರ್ನಾಟಕದ ಹಲವು ಪ್ರದೇಶಗಳಿಗೆ ನೀರಿನ ಅಭಾವ ನೀಗಿಸಿದರು ಎಂದರು.
ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಶ್ರೀ ಮೆಟಗುಡ್ಡ ಅಧ್ಯಕ್ಷತೆಯನ್ನು ವಹಿಸಿದ್ದರು. ಎಂ.ವೈ.ಮೆಣಸಿನಕಾಯಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೇಮಾವತಿ ಸೊನೊಳ್ಳಿ ಸ್ವಾಗತಿಸಿದರು. ಶ್ರೀ.ವೀರಭದ್ರಪ್ಪ ಅಂಗಡಿ ಅವರು ಉಪನ್ಯಾಸಕರ ಮತ್ತು ಅತಿಥಿಗಳ ಪರಿಚಯವನ್ನು
ಮಾಡಲಿದ್ದಾರೆ. ಮಲ್ಲಿಕಾರ್ಜುನ ಕೋಳಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು.

ಸುರೇಶ ಹಂಜಿ, ಡಾ.ಅವಿನಾಶ ಶಿಂಧಿಹಟ್ಟಿ, ಸಾಹಿತಿಗಳಾದ ಸ.ರಾ.ಸುಳಕೂಡೆ. ಪ್ರಾ.ಬಿ.ಬಿ.ಮಠಪತಿ, ಆರ್.ಬಿ.ಬನಶಂಕರಿ, ಹೇಮಾ ಸೊನೊಳ್ಳಿ, ಜಯಶೀಲಾ ಬ್ಯಾಕೋಡ, ಬೀನಾ ಕತ್ತಿ, ಕಸಾಪ ಸದಸ್ಯರು ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article