ಮಹಿಳಾ ಸ್ವಾವಲಂಬನೆಗೆ ಧರ್ಮಸ್ಥಳ ಸಂಘದಿಂದ ಹೊಲಿಗೆ ತರಬೇತಿ

Ravi Talawar
ಮಹಿಳಾ ಸ್ವಾವಲಂಬನೆಗೆ ಧರ್ಮಸ್ಥಳ ಸಂಘದಿಂದ ಹೊಲಿಗೆ ತರಬೇತಿ
WhatsApp Group Join Now
Telegram Group Join Now
ಬೈಲಹೊಂಗಲ: ತಾಲೂಕಿನ  ಆನಿಗೋಳ ವಲಯ ವಕ್ಕುಂದ ಗ್ರಾಮದ  ಅಕ್ಕಮಹಾದೇವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನೆ ಸಹಯೋಗದಲ್ಲಿ  ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮ ಪ್ರಾಸ್ತಾವಿಕ ಮಾಹಿತಿಯನ್ನು ತಾಲೂಕಾ  ಯೋಜನಾಧಿಕಾರಿಗಳಾದ ವಿಜಯಕುಮಾರ ಮಾತನಾಡಿ ಕಾರ್ಯಕ್ರಮದ  ಉದ್ದೇಶ ಮತ್ತು ತಾಲೂಕಿನಲ್ಲಿ ನಿರ್ವಹಣೆ ಮಾಡುತ್ತಿರುವ 25 ಕೇಂದ್ರಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.
ಧಾರವಾಡ  ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲಾ ಮೇಡಂ ಮಾತನಾಡಿ  ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ  ನಡೆಯುವ ಕಾರ್ಯಕ್ರಮಗಳಲ್ಲಿ ಪ್ರಮಖವಾದ ಶಿಕ್ಷಣ, ಕಾನೂನು ಅರಿವು, ಆರೋಗ್ಯದ ಅರಿವು, ಸಂಸ್ಕಾರ ಸಂಸ್ಕೃತಿ, ಕೌಟುಂಬಿಕ ಸಾಮರಸ್ಯ, ಸ್ವ ಉದ್ಯೋಗ ಪ್ರೇರಣೆ, ನೀಡಿ ಸ್ವಾವಲಂಬನೆ  ಬದುಕು ಕಟ್ಟಿಕೊಳ್ಳಲು ಹೆಣ್ಣು ಮಕ್ಕಳಿಗೆ ಒಳ್ಳೆ ಅವಕಾಶ ಸಿಗುವದು  ಸಂಘದ ಸದಸ್ಯರಿಗೆ ಮಾತ್ರ ಎನ್ನುವ ಮಾಹಿತಿ ನೀಡುವ ಮೂಲಕ ಸಂಸ್ಥೆಯಲ್ಲಿ ನಡೆಯುವ ಇತರ ಕಾರ್ಯಕ್ರಮಗಳಲ್ಲಿ ಪ್ರಮುಖವಾದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮಾಸಾಸನ  ವಾತ್ಸಲ್ಯ ಕಾರ್ಯಕ್ರಮದಲ್ಲಿ ಕೈಗೊಳ್ಳುವ ಪ್ರಮುಖ ಕೆಲಸಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು.
ಪಿಡಿಓ  ವಿಜಯಲಕ್ಷ್ಮಿ ಅನಿಗೋಳ ಮಾತನಾಡಿ   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಳ್ಳೆಯ  ಕೆಲಸ ಕಾರ್ಯಗಳನ್ನು   ಮಾಡುವಂತಹ ಒಂದು ಸಂಸ್ಥೆ ನಾವು ಕೂಡ ಸಂಸ್ಥೆಗೆ ಸಹಕಾರ ನೀಡಿ  ಇನ್ನೂ ಒಳ್ಳೆಯ  ಕೆಲಸಗಳಲ್ಲಿ ಮಾಡಲು ಮಹಿಳೆಯರು  ತೊಡಗಿಸಿಕೊಂಡು ಗ್ರಾಮೀಣ  ಪ್ರದೇಶದ ಜನರಿಗೆ ಒಳ್ಳೆಯ ಸ್ವ ಉದ್ಯೋಗ  ಮಾಡುವ ಅವಕಾಶ ಕಲ್ಪಿಸುವಲ್ಲಿ ನಾವು ಕೂಡ ಯಾವಾಗಲೂ ನಿಮ್ಮ ಒಟ್ಟಿಗೆ ಇದ್ದೇವೆ ಎಂದರು.
ಚಿತ್ರನಟ, ರಂಗಭೂಮಿ ಕಲಾವಿದ,  ಸಿ ಕೆ. ಮೆಕ್ಕೇದ ಮಾತನಾಡಿ    ಈ ಕಾರ್ಯಕ್ರಮ  ತುಂಬಾ ಉಪಯುಕ್ತವಾಗಿದ್ದು  ಜನರಲ್ಲಿ ಜಾಗೃತಿ ಮತ್ತು ಮಹಿಳೆಯರ  ಆರ್ಥಿಕ ವ್ಯವಸ್ಥೆ  ಅಭಿವೃದ್ಧಿಪಡಿಸಲು ಒಳ್ಳೆಯ ಮಾಹಿತಿ ಸಿಕ್ಕಿರುತ್ತದೆ  ಎಂದು ತಿಳಿಸಿದರು.
ಗ್ರಾ ಪಂ ಅಧ್ಯಕ್ಷ  ಸಂಗಣ್ಣ ಭದ್ರಶೆಟ್ಟಿ ಮಾತನಾಡಿ    ಯೋಜನೆ ಕೇವಲ ಆರ್ಥಿಕ ಸಹಾಯ ಅಷ್ಟೇ ಅಲ್ಲ ಸಾಮಾಜಿಕವಾಗಿ ಕೂಡ ಇಂತಹ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿದ್ದು ಜನಸಾಮಾನ್ಯರಿಗೆ ಇದರ ಉಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ತಾ ಪಂ ಅಧ್ಯಕ್ಷ ಬಸನಗೌಡ ಪಾಟೀಲ, ಶಂಕರ ಕೊಟ್ಟಿಗೆ, ಶ್ರೀಮತಿ ಸರಳಾ ಭದ್ರಶೆಟ್ಟಿ, ಕಾರ್ಯಕ್ರಮದಲ್ಲಿ  ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ  ಶೈಲಾ ನಿರೂಪಿಸಿದರು, ಹಾಗೂ ವಲಯದ ಮೇಲ್ವಿಚಾರಕರಾದ ಗಣಪತಿ ಸ್ವಾಗತಿಸಿದರು  ಸೇವಾ ಪ್ರತಿನಿಧಿ ಭಾರತಿ ಕೊಟ್ಟಗಿ  ಅವರು ವಂದಿಸಿದರು.

WhatsApp Group Join Now
Telegram Group Join Now
Share This Article