ಬೆಳಗಾವಿ: ಪ್ರವಾದಿ ಪೈಗಂಬರ್ ಮೊಹಮ್ಮದ್ ಅವರ ಹುಟ್ಟಿದ ದಿನದ ಅಂಗವಾಗಿ ಬೆಳಗಾವಿಯ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಸೆ. 3ರಿಂದ 14ರವರೆಗೆ ರಾಜ್ಯಾದ್ಯಂತ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಭಾಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿದೆ. ಸೆ.3ರಂದು ಸೀರತ್ ವಿಚಾರಸಂಕಿರಣ, ಶುಕ್ರವಾರ ಮಸ್ಜಿದ್‌ಗಳಲ್ಲಿ ಧರ್ಮೋಪದೇಶ, ಸೆ.7ರಂದು ಸೀರತ್ ಪ್ರವಚನ, ವಿವಿಧ ವೃದ್ಧಾಶ್ರಮಗಳಿಗೆ ಭೇಟಿ, ವಿವಿಧ ಸಾಮಾಜಿಕ ಚಟುವಟಿಕೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.