ವಿಜಯನಗರ(ಹೊಸಪೇಟೆ), : ಸದೃಢ ಆರೋಗ್ಯವಂತ ಜನರಿಂದ ಮಾತ್ರ ಸಧೃಡ ದೇಶ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರಿರೂ ಸಮತೋಲನ, ಪೋಷಕಾಂಶಯುಕ್ತ ಆಹಾರದಿಂದ ಮಾತ್ರವೇ ಆರೋಗ್ಯ ಭಾಗ್ಯ ಸಿಗಲಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಸುಬ್ರಮಣ್ಯ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಹಳೇಮಲಪನಗುಡಿ ಗ್ರಾಮದ 7ನೇ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಪೌಷ್ಟಿಕ ಅಹಾರ ದಿನಾಚರಣೆಯನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು, ಹಿಂದೆ ಪೂರ್ವಜರು ಹವಾಮಾನಕ್ಕೆ ತಕ್ಕಂತೆ ಆಹಾರ ಪದ್ದತಿಯನ್ನು ಅಳವಡಿಸಿಕೊಂಡಿದ್ದರು. ಸಧೃಡ ಆರೋಗ್ಯದಿಂದ ಧೀರ್ಘಾಯುಷಿಗಳಾಗಿ ಜೀವನ ಸಾಗಿಸುತ್ತಿದ್ದರು. ಆಗ ಗರ್ಭಿಣಿಯರಿಗೆ ಪೌಷ್ಟಿಕಾಂಶ ಅಹಾರವನ್ನು ನೀಡುವ ಮೂಲಕ ಶಸ್ತçಚಿಕಿತ್ಸೆಗಳಿಲ್ಲದೇ ಸಾಮಾನ್ಯ ಹೆರಿಗೆಗಳು ಹೆಚ್ಚಾಗುತ್ತಿದ್ದವು. ಆದರೆ ಇಂದಿನ ಆಧುನಿಕ ಆಹಾರ ಪದ್ದತಿಯಿಂದಾಗಿ ಬಹುತೇಕ ಗರ್ಭಿಣಿಯರಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿವೆ. ಅಪೌಷ್ಟಿಕ ಅಹಾರ ಸೇವನೆಯಿಂದಾಗಿ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ಇಂದು ಸಾಮಾನ್ಯವಾಗಿದೆ. ಸಿರಿಧಾನ್ಯಗಳು ಸೇರಿದಂತೆ ದ್ವಿದಳ ಧಾನ್ಯಗಳನ್ನು ಅಹಾರದಲ್ಲಿ ಹೆಚ್ಚು ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷವಾಗಿ ಆಹಾರ ಪದ್ದತಿಯ ಜಾಗೃತಿಯನ್ನು ಮೂಡಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿವೆ. ಸರ್ಕಾರವೇ ಖುದ್ದು ಅಂಗನವಾಡಿಗಳ ಮೂಲಕ ಪೌಷ್ಟಿಕ ಅಹಾರಗಳನ್ನು ಗರ್ಭಿಣಿಯರುಗೆ ಮನೆಮನೆಗೆ ವಿತರಿಸುವ ಮೂಲಕ ಬಾಣಂತಿ ಮತ್ತು ಶಿಶುಗಳ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಂಡು ಪೌಷ್ಟಿಕ ಆಹಾರ ಸೇವೆನೆಯಿಂದ ಆರೋಗ್ಯ ಕಾಳಜಿವಹಿಸಬೇಕಿದೆ ಎಂದರು.
ಮಲಪನಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ ಮಾತನಾಡಿ, ಮಕ್ಕಳು ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ಸಮಸ್ಯೆಯನ್ನು ಹೆಚ್ಚಾಗಿ ಕಾಣುತ್ತೇವೆ. ರಕ್ತಹೀನತೆ ಸಮಸ್ಯೆಯಿಂದಾಗಿ ಶಿಶು ಮತ್ತು ಬಾಣಂತಿ ಮರಣ ಪ್ರಕರಣಗಳು ಹೆಚ್ಚಾಗುತ್ತವೆ. ಶಿಶು ಜನಿಸಿದ ಆರು ತಿಂಗಳವರೆಗೆ ಕಡ್ಡಾಯವಾಗಿ ತಾಯಿಯ ಎದೆಹಾಲನ್ನು ನೀಡಬೇಕು. ಅಪೌಷ್ಟಿಕತೆ ಆಹಾರ ಸೇವನೆಯಿಂದ ಮಕ್ಕಳಲ್ಲಿ ಜಂತುಹುಳ ಸಮಸ್ಯೆ ಹೆಚ್ಚಾಗಿ ಮಕ್ಕಳ ಬೆಳವಣಿಗೆ ಕುಂಠಿತವಾಗಲಿದೆ. ಇಂತಹ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಪೋಷಣೆ ಮಾಡಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಸಿಂಧು ಅಂಗಡಿ ಮಾತನಾಡಿ, ಸಧೃಡ ಆರೋಗ್ಯಕ್ಕೆ ಸಮತೋಲನ ಮತ್ತು ಪೌಷ್ಟಿಕಾಂಶಯುಳ್ಳ ಅಹಾರ ಸೇವನೆ ಪ್ರಮುಖವಾಗಿದೆ. ಗರ್ಭಾವಸ್ಥೆಯಿಂದಲೇ ಪ್ರತಿಯೊಂದು ಮನೆಮನೆಗೆ ಪೌಷ್ಠಿಕ ಅಹಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಇಲಾಖೆಯಿಂದ ಮಾಡಲಾಗುತ್ತದೆ. ಅಷ್ಟಲ್ಲದೇ ಗರ್ಭದಿಂದ ಗೋರಿಯವರೆಗೆ ಅನೇಕ ಸೇವೆಗಳನ್ನು ನೀಡಲಾಗುತ್ತದೆ. ಪೋಷಣ್ ಮಾಸಾಚರಣೆ ಮೂಲಕ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ನೀಡುವ ಕುರಿತು ಸುಮಾರು ಒಂದು ಸಾವಿರ ದಿನಗಳನ್ನು ಆರೋಗ್ಯ ರಕ್ಷಣೆಯ ಮೇಲ್ವಿಚಾರಣೆಯನ್ನು ಮಾಡಲಾಗುತ್ತದೆ. ಬಾಲ್ಯ ವಿವಾಹ ಪ್ರಕರಣಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ಇರುವ ಗರ್ಭೀಣಿಯರಲ್ಲಿ ಶಿಶು ಮರಣ ಮತ್ತು ಬಾಣಂತಿ ಮರಣ ಪ್ರಕರಣಗಳು ಹೆಚ್ಚಾಗಿ ಕಾಣುತ್ತೇವೆ. ಹಾಗಾಗೀ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿ ಮಾಡಲಾಗಿದೆ.
ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಪ್ರಶಾಂತ್ ನಾಗಲಾಪುರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಮಲಪನಗುಡಿ ಗ್ರಾಪಂ ಉಪಾಧ್ಯಕ್ಷ ದೊರೆ, ಗ್ರಾಪಂ ಮಾಜಿ ಅಧ್ಯಕ್ಷ ಪಂಪಾಪತಿ, ಗ್ರಾಪಂ ಸದಸ್ಯ ವೆಂಕಟೇಶ, ಸೇರಿದಂತೆ ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.