ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ಗೆ ಕಾ.ನಿ.ಪ ಸಂಘದಿಂದ ನುಡಿ ನಮನ  

Ravi Talawar
ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ಗೆ ಕಾ.ನಿ.ಪ ಸಂಘದಿಂದ ನುಡಿ ನಮನ  
WhatsApp Group Join Now
Telegram Group Join Now
ಅಥಣಿ: ಕಳೆದ ಮೂರು ದಶಕಗಳ ಕಾಲ ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ಅವರು ಸ್ವಾಭಿಮಾನಿ ಮತ್ತು ವಸ್ತುನಿಷ್ಟ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಬಾಳಾಸಾಹೇಬ ಲೋಕಾಪುರ ಕಂಬನಿ ಮಿಡಿದರು.
 ಅವರು ಅಥಣಿ ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಥಣಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಗಲಿದ ಹಿರಿಯ ಪತ್ರಕರ್ತ ಸಿ. ಎ. ಇಟ್ನಾಳಮಠ ಅವರ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾಗಿದ್ದ ಇಟ್ನಾಳಮಠ ಅವರು ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುವ ಮೂಲಕ ವಸ್ತುನಿಷ್ಠ ವರದಿಗಳನ್ನು ಮತ್ತು ಲೇಖನಗಳನ್ನು ನೀಡಿ ಎಲ್ಲರ ಗಮನ ಸೆಳೆದಿದ್ದರು. ಇದಲ್ಲದೆ ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ ತೊಡಗಿಸಿಕೊಂಡಿದ್ದರು. ಅಥಣಿಯ ಅನೇಕ ಸಂಗತಿಗಳ ಬಗ್ಗೆ ಇತಿಹಾಸ ಬಲ್ಲವರಾಗಿದ್ದ ಅವರು ಅಪಾರ ಜ್ಞಾನ ಬಂಡಾರ ಹೊಂದಿದ್ದರು. ಬಡತನ ಮತ್ತು ಅಂಗವಿಕಲತೆಯನ್ನು ಮೆಟ್ಟಿನಿಂತು ಸ್ವಾಭಿಮಾನಿ ಮತ್ತು ಮೌಲ್ಯಯುತ ಬದುಕು ನಡೆಸಿಕೊಂಡು ಬಂದವರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯೇಜಿಸುವ ಸ್ಥಿತಿ ಬಂದಿದೆ ಎಂಬ ಕೊರಗು ಇಂದು ನಮಗೆಲ್ಲರಿಗೂ ಕಾಡುತ್ತಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ಸದಸ್ಯರಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
 ನಿವೃತ್ತ ಇಂಜಿನಿಯರ ಅರುಣ ಯಲಗುದ್ರಿ,
 ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪರಶುರಾಮ ನಂದೇಶ್ವರ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು.
 ಈ ವೇಳೆ ಅಗಲಿದ ಪತ್ರಕರ್ತ ಇಟ್ನಾಳಮಠ ಅವರ ಸುಪುತ್ರ ಡಾ. ಅಭಿನವ ಇಟ್ನಾಳಮಠ,  ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ, ಬಣಜವಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಬಣಜವಾಡ, ಸತ್ತಿಯ ಪಾಟೀಲ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಚಿದಾನಂದ ಪಾಟೀಲ, ಸಾಹಿತಿ ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ, ಡಾ. ಅರ್ಚನಾ ಅಥಣಿ, ಎಸ್ ಕೆ ಹೊಳೆಪ್ಪನವರ, ದೇವಿಂದ್ರ ಬಿಸ್ವಾಗರ, ಎಸ್ ಎಸ್ ಹೂಟಿ, ನೀಲೇಶ್ ಝರೆ, ಕೈಲಾಸ ಮದಬಾವಿ, ಪತ್ರಕರ್ತ ಶಿವಕುಮಾರ ಅಪರಾಧ, ಅಣ್ಣಾಸಾಬ ತೆಲಸಂಗ, ರಮೇಶ್ ಬಾದವಾಡಗಿ, ರಾಕೇಶ ಮೈಗೂರ, ಜಬ್ಬಾರ ಚಿಂಚಲಿ, ವಿಲಾಸ ಕಾಂಬಳೆ, ಕನ್ನಡ ಪರ ಹೋರಾಟಗಾರ ಜಗನ್ನಾಥ ಬಾಮನೆ, ಸಿದ್ದು ಮಾಳಿ ಸೇರಿದಂತೆ ಅನೇಕರು ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಿದರು.
WhatsApp Group Join Now
Telegram Group Join Now
Share This Article