ಆಗಸ್ಟ್ 5ರಂದು ಪ್ರಗತಿನಗರ ಹಿರಿಯ ನಾಗರಿಕರ ಸಂಘಧ ಚುನಾವಣೆ

Ravi Talawar
ಆಗಸ್ಟ್ 5ರಂದು ಪ್ರಗತಿನಗರ ಹಿರಿಯ ನಾಗರಿಕರ ಸಂಘಧ ಚುನಾವಣೆ
WhatsApp Group Join Now
Telegram Group Join Now
ಹೈದ್ರಾಬಾದ,ಜು.28-ಹೈದ್ರಾಬಾದದ ಪ್ರಗತಿನಗರ ಹಿರಿಯ ನಾಗರಿಕರ ಸಂಘದ ಚುನಾವಣೆಯು ಆಗಸ್ಟ್ 5ರಂದು ಮಂಗಳವಾರ ಬೆಳಗಿನ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಅಂದು ಸಂಜೆ 5 ಗಂಟೆಯವರೆಗೆ ಫಲಿತಾಂಶ ಪ್ರಕಟಿಸಲಾಗುವುದು.
         ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಜನರಲ್ ಸೆಕ್ರೆಟರಿ,  ಜಾಯಿಂಟ್ ಸೆಕ್ರೆಟರಿ, ಟ್ರೆಜರರ್, ಮತ್ತು ನಾಲ್ಕು ಸದಸ್ಯರ ಆಯ್ಕೆಗಾಗಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜುಲೈ 30 ರಿಂದ ಆಗಸ್ಟ್ 2 ರವರೆಗೆ ಬೆಳಗಿನ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ದೊಂದಿಗೆ ಓಟರ್ ಮತ್ತು ಆಧಾರ ಕಾರ್ಡ್ ಪ್ರತಿ ಸಲ್ಲಿಸುವುದು ಕಡ್ಡಾಯವಾಗಿದೆ.
         ಆಗಸ್ಟ್ 3 ರಂದು ಸಂಜೆ 4 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ಕೈಗೊಂಡು, ಅಂದು ಸಂಜೆ 5 ಗಂಟೆಗೇ ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು.ಸಂಘದ ಈಗಿನ ಕಾರ್ಯಕಾರಿ ಸಮಿತಿಯ ಅವಧಿಯು ಜುಲೈ 27 ರಂದು ಕೊನೆಗೊಂಡ ಪ್ರಯುಕ್ತ  ಈ ಚುನಾವಣೆ ಘೋಷಿಸಲಾಗಿದೆ ಎಂದು ಚುನಾವಣಾ ಸಮಿತಿ ಸದಸ್ಯರಾದ ಜಿ.ಕಾಮೇಶ್ವರರಾವ, ಪಿ.ವೆಂಕಟೇಶ್ವರಲುಗಾರು,ಪಿ.ವಿ.ಸೀತಾರಾಮರಾವಗಾರು ಮತ್ತು ಕೆ.ಹರನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article