ನಿವೃತ್ತ ನೌಕರರ ಸಂಘದಲ್ಲಿ ಹಿರಿಯ ನಾಗರೀಕರ ಹುಟ್ಟು ಹಬ್ಬ ಆಚರಣೆ| ಸಾಂಸ್ಕೃತಿಕ ಕಾರ್ಯಕ್ರಮ 

Ravi Talawar
ನಿವೃತ್ತ ನೌಕರರ ಸಂಘದಲ್ಲಿ ಹಿರಿಯ ನಾಗರೀಕರ ಹುಟ್ಟು ಹಬ್ಬ ಆಚರಣೆ| ಸಾಂಸ್ಕೃತಿಕ ಕಾರ್ಯಕ್ರಮ 
WhatsApp Group Join Now
Telegram Group Join Now
ಗದಗ  ೦೧: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಗದಗ ಜಿಲ್ಲಾ ಘಟಕ, ಬಸವೇಶ್ವರ ನಗರದಲ್ಲಿ ನಿವೃತ್ತ ನೌಕರರ ಸಂಘದ ಜೂನ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟು ಹಬ್ಬದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಸಂಘದ ಹಿರಿಯ ಸದಸ್ಯರಾದ ಜಾನಪದ ಸಾಹಿತಿಗಳಾದ ಡಾ. ಸಿದ್ದಣ್ಣ ಜಕಬಾಳರವರು ವಹಿಸಿದ್ದರು. ಅವರು ಮಾತನಾಡುತ್ತಾ ಜೂನ ತಿಂಗಳಲ್ಲಿ ಜನಿಸಿ, ಹುಟ್ಟು ಹಬ್ಬವನ್ನು ಆಚರಿಸಕೊಳ್ಳುತ್ತಿರುವ ಸಂಘದ ಎಲ್ಲ ಸದಸ್ಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳನ್ನು ತಿಳಿಸಿದರು. ಪ್ರತಿಯೊಬ್ಬರಿಗೂ ಮುಂಬರತಕ್ಕ ದಿನಗಳು ಸುಖ, ಸಂತೋಷ, ಆರೋಗ್ಯ, ನೆಮ್ಮದಿಯನ್ನು ನೀಡಲಿ ಎಂದು ಹಾರೈಸುತ್ತಾ ಮನರಂಜನೆ ಮನುಷ್ಯನ ಆರೋಗ್ಯ ವೃಧ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಯಾವುದೇ ಮನರಂಜನೆ ನೋಡುವುದಾಗಲಿ, ಕೇಳುವುದಾಗಲಿ ಮನುಷ್ಯನ ಗಮನ ಸೆಳೆದು ಅನಾರೋಗ್ಯದ ಚಿಂತೆಯನ್ನು ದೂರ ಮಾಡುತ್ತದೆ ಎಂದರು. ಅವರು ಮುಂದುವರೆದು ಜಾನಪದ ಹಾಡುಗಾರಿಕೆಯ ವಿವಿಧ ಪ್ರಬೇದಗಳ ಹಾಡುಗಳನ್ನು ಹೇಳಿದರು. ಡೊಳ್ಳು ಬಾರಿಸುತ್ತಾ ಡೊಳ್ಳಿನ ಪದಗಳಲ್ಲಿನ ಲಯಗಳು, ಪ್ರಭೇದಗಳನ್ನು ತಿಳಿಸಿದರು. ಡೊಳ್ಳಿನ ವಿವಿಧ ಹಾಡುಗಳನ್ನು ಹಾಡಿ ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಪ್ರೋ.ಕೆ.ಎಚ್.ಬೇಲೂರರವರು ವಹಿಸಿದ್ದರು. ಅವರು ಮಾತನಾಡಿ ಮನರಂಜನೆ, ಧಾನ, ಲಘು ವ್ಯಾಯಾಮಗಳಿಂದ ಮನುಷ್ಯ ಕ್ರೀಯಾಶೀಲನಾದಾಗ ಮಾತ್ರ ಆರೋಗ್ಯದಿಂದ ಇರಲು ಸಾದ್ಯ ಎಂದರು. ಅವರು ಮುಂದುವರೆದು ಮಾತನಾಡುತ್ತಾ ಮಕ್ಕಳ ಹುಟ್ಟು ಹಬ್ಬ ಆಚರಿಸುವುದು ಸಾಮಾನ್ಯ, ಆದರೇ ಹಿರಿಯ ನಾಗರೀಕರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಬಹಳ ವಿಶೇಷ ಎಂದರು. ಹಿರಿಯರಿಗೆ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಅವರಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತೇವೆ. ಹಿರಿಯರು ಲವ-ಲವಿಕೆಯಿಂದ ಓಡಾಡಿದರೆ ಸಣ್ಣ-ಪುಟ್ಟ ರೋಗಗಳು ದೂರಾಗುತ್ತವೆ ಎಂದರು. ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿರಿಯರು ತಮ್ಮ ಸಂಗಾತಿಯೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಸಂಭ್ರಮಿಸುತ್ತಿರುವುದನ್ನು ನೋಡುವುದೇ ಎಲ್ಲರಿಗೂ ಸಂತೋಷವನ್ನುಂಟು ಮಾಡುತ್ತದೆ ಎಂದರು. ಎಲ್ಲ ಸದಸ್ಯರು ಪ್ರತಿ ತಿಂಗಳು ಆಯಾ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟು ಹಬ್ಬ ಆಚರಿಸಿ ಎಲ್ಲರೂ ಸಹಭೋಜನ ಮಾಡುವುದೇ ವಿಶೇಷ ಎಂದು ಹೇಳಿ, ಜೂನ ತಿಂಗಳಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಎಲ್ಲ ಸದಸ್ಯರಿಗೆ ಶುಭ ಹಾರೈಸಿದರು. ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ ಹೊಳೆ ಆಲೂರಿನವರಾದ ಶ್ರೀಮತಿ ಜಯಶ್ರೀ ಜಂಗಮಶೆಟ್ಟಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲವು ತತ್ವಪದಗಳನ್ನು ಹಾಡಿ ಸಭಿಕರನ್ನು ರಂಚಿಸಿದರು.
ಜೂನ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಪ್ರೋ ಕೆ.ಎಚ್. ಬೆಲೂರ, ಪ್ರೋ. ಎಂ.ಸಿ.ವಗ್ಗಿ, ಆರ್.ಟಿ. ನಾರಾಯಣಪೂರ, , ಎಂ.ಬಿ. ಹಳ್ಳಿ, ಜಿ.ಕೆ.ಮಡಿವಾಳರ, ಎಸ್.ಎಸ್. ಬಳ್ಳಾರಿ, ಟಿ.ಎಚ್.ಕಾರಬಾರಿ, ಜಿ.ಕೆ.ನಾಗರಳ್ಳಿ, ಎಂ.ಟಿ. ಕಬ್ಬಿಣ, ಆರ್.ಎಚ್.ಮೆಹರವಾಡೆ, ಜಿ.ಎಸ್. ಸಜ್ಜನರ, ಎಸ್.ಡಿ. ಗೌಡಪ್ಪಗೌಡರ, ಬಸಯ್ಯ ಬಣಕಾರ, ಡಿ.ಎಫ್, ಹದ್ಲಿ, ಟಿ.ಸಿ.ಲಮಾಣಿ, ಶ್ರೀಮತಿಯರಾದ ಭಾರತಿ ಕೋಟಿ, ಪ್ರಮಿಳಾ ನಂದರಗಿ, ಶಾಂತಾಬಾಯಿ ಗಿಡ್ಡನಂದಿ, ಮಮತಾಜಬೇಗಂ ಡಂಬಳ, ಆರ್. ಎಚ್. ಲಕ್ಕುಂಡಿ, ವ್ಹಿ.ಜಿ.ಕೊಳ್ಳಿ, ಜಿ.ಆಯ್. ಮುಜಾವರ ಮುಂತಾದವರೊಂದಿಗೆ ಒಟ್ಟು ೧೮೨ ಜನ ಸದಸ್ಯರಿಗೆ ಹುಟ್ಟು ಹಬ್ಬದ ಪ್ರಯುಕ್ತ ನೆನಪಿನ ಕಾಣಿಕೆಗಳನ್ನು ನೀಡಿ, ಗೌರವಿಸಿ ಶುಭಕೋರಲಾಯಿತು. ಕಾರ್ಯಕ್ರಮದ ಮುಖ್ಯ ಅತಿಧಿಗಳಾದ ಡಾ.ಸಿದ್ದಣ್ಣ ಜಕಬಾಳ, ದಾಸೋಹಕ್ಕಾಗಿ ಸಿಹಿ ನೀಡಿದ ವ್ಹಿ.ಆರ್. ಕುಲಕರ್ಣಿ, ಎಂ.ಎಪ್. ಡೋಣಿ ಮತ್ತು ಬೆಂಗಳುರಿನಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಮತಿ ಜಯಶ್ರೀ ಜಂಗಮಶೆಟ್ಟಿಯವರನ್ನು ಸನ್ಮಾನಿಸಲಾರಯಿತು.
ಕಾರ್ಯಕ್ರಮದಲ್ಲಿ ಶ್ರೀ ಎಲ್,ಎಸ್. ನೀಲಗುಂದ, ವಾಯ್.ಕೆ.ಪಿಡಗಣ್ಣವರ, ಡಿ.ಬಿ.ಕಿಲಬನಗರ, ಟಿ.ಇ. ಕಾಳೆ, ಪಿ.ಟಿ. ನಾರಾಣಪೂರ, ಎಂ.ಎಫ್ ಡೋಣಿ, ಕೆ.ಎ.ಹೊಳಗುಂದಿ, ಎಸ್.ಎಫ್. ಕಂಬಿಮಠ,  ವ್ಹಿ.ಎ.ಸೋನಾರ, ಎಸ್.ಎಫ್ ಜಂಗಣ್ಣವರ, ಎಂ.ವಾಯ್.ಹಳೆಮನಿ, ಎಮ್,ಎಸ್.ಚಿನ್ನೂರ, ಆರ್.ವ್ಹಿ. ಕುಪ್ಪಸ್ತ, ಸುರೇಶ ಡಂಬಳ, ಬಿ,. ಆಯ್. ಧರಣಿ, ಶ್ರೀ ಥಂಡರ, ಶ್ರೀ ಐರಣಿ, ಪಿ.ಸಿ.ಪುರಾನಿಕಮಠ, ಎ.ಸಿ.ಪಾಟೀಲ, ಎಸ್.ಆಯ್.ಚಲಗೇರಿ, ಶ್ರೀಮತಿ ಪ್ರೇಮಲತಾ ಹಿರೇಮಠ, ಶಕುಂತಲಾ ಸಿಂದೂರ, ಬಿ.ಎಸ್.ದಂಡಿನ, , ಹೇಮಲತಾ ಬೇಗೂರ, ಪ್ರತಿಭಾ ವಗ್ಗಿ, ಸಾವಂತ್ರವ್ವ ಪಿಳ್ಳಿ, ಶ್ರೀಮತಿ ಲಲಿತಾ ಬೇಲೂರ, ಬಿ.ಎಂ. ಜಾಗಿರದಾರ, ಎಸ್.ಎಂ. ಇಟಗಿ, ಎಸ್.ಎಸ್.ಬಿಜಲಿ, ಯು.ಎಸ.ಬ್ಯಾಳಿ, ವಾಯ್.ಕೆ.ಬಾಕಳೆ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ವ್ಹಿ. ಎಂ. ಮುಂದಿನಮನಿ ಅದ್ಯಕ್ಷರಿಗೆ ಕಾಲರ್ ಧರಣೆ ಮಾಡಿದರು, ಐ.ಕೆ.ಮಣಕವಾಡ ಪ್ರಾರ್ಥಿಸಿದರು, ಕೊ-ಆಪ್ ಬ್ಯಾಂಕನ ಚೇರಮನ್ನರಾದ ಶ್ರೀ. ಬಿ. ಎಂ. ಬಿಳೆಯಲಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕೊಶಾಧಿಕಾರಿಗಳಾದ ಶ್ರೀ ಆರ್.ಟಿ. ನಾರಾಯಣಪೂರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿಸಿಕೊಟ್ಟರು, ಪ್ರೋ. ಎಂ.ಸಿ.ವಗ್ಗಿ ಕಾರ್ಯಕ್ರಮ ನಿರುಪಿಸಿದರು, ಕೊನೆಯಲ್ಲಿ ಪ್ರೋ. ಎಂ.ಬಿ. ಹಳ್ಳಿ ವಂದಿಸಿದರು.
ದಿ. ೦೧/೦೭/೨೦೨೫     ಪ್ರೋ.ಎಂ.ಸಿ.ವಗ್ಗಿ
೯೧೧೩೫೯೫೯೦೦
WhatsApp Group Join Now
Telegram Group Join Now
Share This Article