ಬಳ್ಳಾರಿ,ಸೆ.19. ಪ್ರಧಾನಿ ನರೇಂದ್ರಮೋದಿಯವರ ೭೫ನೇ ಜನ್ಮ ದಿನಾಚರಣೆ ನಿಮಿತ್ತ ಬಳ್ಳಾರಿಯ ತೆರಪಂತ್ ಯುವಕ್ ಪರಿಷದ್, ನಂದಿ ಇನ್ಟಿಟ್ಯೂಟ್‌ಆಫ್ ಮ್ಯಾನೇಜ್‌ಮೆಂಟ್& ಸೈನ್ಸ್, ಬಳ್ಳಾರಿ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಮತ್ತು ಬಿಮ್ಸ್ ಸಂಯುಕ್ತಾಶ್ರಯದಲ್ಲಿ ಬಳ್ಳಾರಿಯ ನಂದಿ ಕಾಲೇಜಿನಲ್ಲಿ “ಮೇಘಾ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು” ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿಯ ತೆರಪಂತ್‌ಯುವಕ್ ಪರಿಷದ್‌ದಿಂದ ಆರಾಧನ ಭವನದಲ್ಲಿ ಸುಮಾರು ೬೦ ಜನ ಸ್ವಯಂ ಸೇವಕರು ರಕ್ತದಾನ ಮಾಡಿದರು. ನಂದಿ ಇನ್ಟಿಟ್ಯೂಟ್‌ಆಫ್ ಮ್ಯಾನೇಜ್‌ಮೆಂಟ್& ಸೈನ್ಸ್ ವಿದ್ಯಾರ್ಥಿಗಳಿಂದ ಸುಮಾರು ೮೬ ಜನರಕ್ತದಾನ ಮಾಡಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿ ರೆಡ್‌ಕ್ರಾಸ್ ಸಂಸ್ಥೆಯ ಉಪ ಸಬಾಪತಿ ಡಾ||.ಎಸ್.ಜೇ.ವಿಮಹಿಪಾಲ್‌ರವರು ರಕ್ತದಾನದ ಮಹತ್ವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಾದರ್ಶಿ ಎಂ.ಎ.ಷಕೀಬ್, ಈ.ಸಿ ಸದಸ್ಯ ಬಿ.ದೇವಣ್ಣ, ರೆಡ್‌ಕ್ರಾಸ್ ಸದಸ್ಯರಾದ ಮಹಬೂಬ್ ಬಾಷಾ, ಬಸಂತ್, ಅಶೋಕ್ ಜೇನ್, ಎಂ.ವಲಿ ಬಾಷಾ ಉಪಸ್ಥಿತರಿದ್ದರು.