ಕರವೇ ನೂತನ ಪದಾಧಿಕಾರಿಗಳ ಆಯ್ಕೆ

Ravi Talawar
ಕರವೇ ನೂತನ ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now
ಘಟಪ್ರಭಾ. ದಿ.4-01-2025 ರಂದು ದುಪದಾಳ ಪ್ರವಾಸಿ ಮಂದಿರದಲ್ಲಿ ಕನ್ನಡ ರಕ್ಷಣಾ ವೇದಿಕೆಯ ನೂತನ  ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
  ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ನೇತೃತ್ವದಲ್ಲಿ ಹುಕ್ಕೇರಿ ತಾಲೂಕಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಶಿಂದೆ, ಚಿಕ್ಕೋಡಿ ಲೋಕಸಭಾ ಘಟಕದ ಅಧ್ಯಕ್ಷರನ್ನಾಗಿ ಸದಾಶಿವ ಸಂಪಗಾರ, ಗೋಕಾಕ ತಾಲೂಕ ಪ್ರಧಾನ ಕಾರ್ಯದರ್ಶಿಯನನ್ನಾಗಿ ಮಂಜುನಾಥ ಸಂಪಗಾರ, ಘಟಪ್ರಭಾ ಘಟಕದ ಅಧ್ಯಕ್ಷರನ್ನಾಗಿ ಯಲ್ಲಪ್ಪ ಅಟ್ಟಿಮೀಟ್ಟಿ ಯವರನ್ನು ಆಯ್ಕೆ ಮಾಡಿ ನಾಡು ನುಡಿ ನೆಲ ಜಲ ಭಾಷೆಗೆ ಕಂಕಣಬದ್ಧರಾ ಕಾರ್ಯವನ್ನು ಮಾಡಲು ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ ಅದೇಶಿಸಿದರು.
      ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ, ಗೋಕಾಕ ತಾಲೂಕಾ ಕಾನೂನು ಸಲಹೆಗಾರದಾರ ಎಮ್.ಆಯ್.ಕೋತವಾಲ ವಕೀಲರು, ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ ಚೌಕಶಿ, ಗೋಕಾಕ ತಾಲೂಕಾ ಉಪಾಧ್ಯಕ್ಷರಾದ ಬಸವರಾಜ ಹುಬ್ಬಳ್ಳಿ,ಉದಯ ಚಿಗಡೋಳ್ಳಿ, ಕಲ್ಲಪ್ಪ ಸನದಿ, ರಮೇಶ ಪಟಗುದ್ದಿ  ಹಾಗೂ ಕಾರ್ಯಕರ್ತರು ಉಪಸಿದ್ಧರು.
WhatsApp Group Join Now
Telegram Group Join Now
Share This Article