ಧಾರವಾಡ: ಕರ್ನಾಟಕ ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಶ್ರೀ ರಾಬರ್ಟ ದದ್ದಾಪುರಿ, ಸಿಂಡಿಕೇಟ ಸದಸ್ಯರು ಇವರನ್ನು ನಾಮನಿರ್ದೇಶನ ಮಾಡಿ ಸಿಂಡಿಕೇಟ ಸಭೆಯು ಅನುಮೋದಿಸಿತು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ರಾಜ್ಯ ಗ್ರಂಥಾಲಯ ಪ್ರಾಧಿಕಾರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಶ್ರೀ ರಾಬರ್ಟ ದದ್ದಾಪುರಿ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಲಿದ್ದಾರೆ.
ರಾಜ್ಯದಲ್ಲಿಯೇ ಎರಡನೇ ಹಳೆಯದಾದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯರಾಗಿ ರಾಜ್ಯ ಗ್ರಂಥಾಲಯದ ಪ್ರಾಧಿಕಾರಕ್ಕೆ ನೇಮಕಗೊಂಡ ಶ್ರೀ ರಾಬರ್ಟ ದದ್ದಾಪುರಿ ಅವರನ್ನು ಕವಿವಿ ಸಿಂಡಿಕೇಟ ಸದಸ್ಯರುಗಳಾದ ಶ್ರೀ ಶ್ಯಾಮ ಮಲ್ಲನಗೌಡರ, ಡಾ. ಬಸವರಾಜ ಗೊರವರ, ಶ್ರೀ ಮಹೇಶ ಹುಲೆನ್ನವರ, ಶ್ರೀಮತಿ ಅಂಜನಾ ಬಸನಗೌಡರ, ಡಾ. ಎಚ್.ಎಸ್. ಅನುಪಮಾ, ಡಾ. ಶಿವಾನಂದ ನಾಯಕ, ಡಾ. ಲಿಂಗರಾಜ ಮುಲೆಲ್ಲಿ, ಶ್ರೀಮತಿ ರತ್ನಾ ಪಾಟೀಲ, ಹಾಗೂ ಶ್ರೀ ಆನಂದ ಜಾಧವ, ಪ್ರಧಾನ ಕಾರ್ಯದರ್ಶಿಗಳು, ಹು-ಧಾ ಮಹಾನಗರಜಿಲ್ಲಾ ಕಾಂಗ್ರೆಸ್ ಸಮಿತಿ, ಶ್ರೀ ಜೇಮ್ಸ್ ಯಾಮಾ ಸೆಕ್ರೆಟರಿ ಸೋಷಿಯಲ್ ಮೀಡಿಯಾ, ಶ್ರೀಮತಿ ಸುರೇಖಾ ಪೂಜಾರ, ಶ್ರೀ ಬಿ.ಎಚ್. ಪೂಜಾರ, ಶ್ರೀ ಬಸವರಾಜ ಗುರಿಕಾರ, ಶಿಕ್ಷಣ ಪ್ರೇಮಿಗಳು, ಚಿಂತಕರು ಮುಂತಾದವರು ಅಭಿನಂದಿಸಿದ್ದಾರೆ.


