ಬೆಳಗಾವಿ: ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಜಿಪಂ ಹಾಗೂ ಡಿಡಿಪಿಯು ಇಲಾಖೆ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ರ್ಯಾಂಕ್ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು.
ಬೆಳಗಾವಿ ಶೈ ಜಿಲ್ಲೆಯ ವಾಣಿಜ್ಯ ವಿಭಾಗ ದಲ್ಲಿ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ತನವಿ ಹೇಮಂತ ಪಾಟೀಲ ಪಡೆದಿದ್ದಾರೆ. ಕಾಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮಹಾಲಕ್ಷ್ಮೀ ಮಂಜುನಾಥ ಕುಸುಗುರ 580 ಅಂಕ, ಸೈನ್ಸ್ ವಿಭಾಗದಲ್ಲಿ ಸಾನಿಯಾ ಅಮ್ಜಾದ್ ಸನದಿ ಹಾಗೂ ಸೃಷ್ಠಿ ಅನೀಲ ದಿಗ್ಗಾಯಿ ತಲಾ 589 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಚಿಕ್ಕೋಡಿ ವಿಭಾಗದಲ್ಲಿ ವಾಣಿಜ್ಯ ವಿಭಾಗ 587 ಅಂಕ ಪಡೆದು ಪೂಜಾ ಸುತಾರ ಚಿಕ್ಕೋಡಿ ಶೈ ಜಿಲ್ಲೆಗೆ ಜಿಲ್ಲೆಗೆ ಪ್ರಥಮ ಸ್ಥಾನ, ಕಲಾ ವಿಭಾಗದಲ್ಲಿ ಕಾವೇರಿ ಪವಾಡಿ ಮಲ್ಲಾಪೂರೆ 594 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಅದೇ ರೀತಿ ಸೈನ್ಸ್ ವಿಭಾಗದಲ್ಲಿ ಅಂಕಿತಾ ಲಗಮಣ್ಣವರ 592 ಅಂಕ ಪಡೆದು ಚಿಕ್ಕೋಡಿ ಶೈ ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಮಕ್ಕಳ ಸಾಧನೆ ಜಿಲ್ಲೆಗೆ ಕಿರ್ತಿ ತಂದಿದೆ. ಪಿ.ಯು.ಸಿ ಅನ್ನುವುದು ಮುಂದಿನ ಶಿಕ್ಷಣದ ಟರ್ನಿಂಗ್ ಪಾಯಿಂಟ್ ಇದ್ದಂತೆ ಕಲಿಕೆಯು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದ್ದು ಸಾಧನೆ ಇಲ್ಲಿಗೆ ಮುಗಿಯಿತು ಎಂದುಕೊಳ್ಳದೇ ಮುಂದಿನ ಭವಿಷ್ಯ ಕಟ್ಟಲು ಪ್ರಜ್ವಲ ಭವಿಷ್ಯ ನಿರ್ಮಿಸಲು ಶ್ರಮ ವಹಿಸಿ ಯು ಆರ್ ದಿ ಶೈನಿಂಗ್ ಸ್ಟಾರ್ ನಿಮ್ಮ ಮುಂದಿನ ಸೇವೆ ಎಂದು ಮಕ್ಕಳ ಉದ್ದೇಶಿಸಿ ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಅದಕ್ಕೆ ಪೋಷಕರ ಸಹಕಾರ ತುಂಬಾ ಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಭೀಮಾಶಂಕರ ಗುಳೆದ ಅವರು ಮಾತನಾಡಿದರು. ಈ ಸಾಧನೆ ನಿಮ್ಮ ತಲೆಗೆ ಏರದೇ ಮುಂದಿನ ಭವಿಷ್ಯಕ್ಕಾಗಿ ಇನ್ನು ಹೆಚ್ಚಿನ ಪ್ರಯತ್ನ ಮಾಡಿ ಉನ್ನತ ಹುದ್ದೆಗಳನ್ನು ಪಡೆದುಕೊಂಡು ದೇಶಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಮಕ್ಕಳಿಗೆ ಕಿವಿ ಮಾತು ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಮಕ್ಕಳಿಗೆ, ಇಂದು ಸತ್ಕಾರ ಮಾಡಿಸಿಕೊಳ್ಳುವ ನೀವು ಮುಂದಿನ ದಿನಗಳಲ್ಲಿ ನಮ್ಮ ಸ್ಥಾನದಲ್ಲಿ ನಿಂತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವಷ್ಟು ಎತ್ತರಕ್ಕೆ ಬೆಳೆಯಬೇಕು ನಿಮ್ಮ ಸಾಧನೆ ಇತರೆ ಮಕ್ಕಳಿಗೂ ಪ್ರೆರೇಪಣೆ ನೀಡಲಿ ಎಂದು ಹಾರೈಸಿದರು. ಅಲ್ಲದೇ ಮಕ್ಕಳಿಗೆ ಪ್ರೋತ್ಸಾಹ ನೀಡಿದ ಪೋಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಅಕ್ರಂ ಪಾಷ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಜಿ.ಪಂ. ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ್, ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ್, ಬೆಳಗಾವಿ ವಿಭಾಗದ ಡಿಡಿಪಿಯು ಎಮ್ ಎಮ್ ಕಾಂಬಳೆ ಚಿಕ್ಕೋಡಿ ವಿಭಾಗದ ಡಿಡಿಪಿಯು ಪಿ.ಐ. ಭಂಡಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.