ಬೈಲಹೊಂಗಲ.ಇತ್ತಿಚಿಗೆ ಚೈನೈನಲ್ಲಿ 7ನೇ ರಾಷ್ಟ್ರೀಯ ಮಟ್ಟದ ಸ್ಪೋರ್ಟ್ಸ್ ಪಾರ್ ಚೆಂಜ್ ಓಟದ ಸ್ಪರ್ದೆಯಲ್ಲಿ ತಾಲೂಕಿನ ಹೊಳಿಹೊಸೂರ ಗ್ರಾಮದ ಉಡುಪಿಯ ಸರ್ಕಾರಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಈರಣ್ಣ ಬಸವರಾಜ ಹಡಪದ ಈತ ದ್ವಿತೀಯ ಬಹುಮಾನವನ್ನು ಪಡೆದು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಈತನ ಸಾಧನೆಯನ್ನು ಅನೇಕ ಮಠಾದೀಶರು, ಮುಖಂಡರು, ರಾಜಕೀಯ ನಾಯಕರು, ಕ್ರೀಡಾ ಪ್ರೊತ್ಸಾಹಕರು, ಗೆಳೆಯರು, ಕುಟುಂಬದವರು ಅಭಿನಂಧಿಸಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಈತನ ಕ್ರಿಡಾ ಸಾಧನೆ ಮುಂದುವರಿಯಲಿ ಎಂದು ಹಾರೈಸಿದ್ದಾರೆ.