ಸ್ಕಾಟ್ಲೆಂಡ್ ಸಂಸತ್ತಿನಲ್ಲಿ ಹಿಂದೂಫೋಬಿಯಾ ವಿರುದ್ಧ ಗೊತ್ತುವಳಿ ಮಂಡನೆ; ಸ್ಕಾಟ್‌ಲ್ಯಾಂಡ್‌ ಐತಿಹಾಸಿಕ ನಿರ್ಧಾರ

Ravi Talawar
ಸ್ಕಾಟ್ಲೆಂಡ್ ಸಂಸತ್ತಿನಲ್ಲಿ  ಹಿಂದೂಫೋಬಿಯಾ ವಿರುದ್ಧ ಗೊತ್ತುವಳಿ ಮಂಡನೆ; ಸ್ಕಾಟ್‌ಲ್ಯಾಂಡ್‌ ಐತಿಹಾಸಿಕ ನಿರ್ಧಾರ
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 21: ಸ್ಕಾಟ್​​ಲ್ಯಾಂಡ್ ದೇಶದಲ್ಲಿ ಹಿಂದೂಫೋಬಿಯಾ  ಚಾಲನೆಯಲ್ಲಿರುವುದನ್ನು ವಿರೋಧಿಸಿ ಅಲ್ಲಿನ ಸಂಸತ್​​​ನಲ್ಲಿ ಗೊತ್ತುವಳಿಯೊಂದನ್ನು ಮಂಡಿಸಲಾಗಿದೆ. ಸ್ಕಾಟ್​​ಲ್ಯಾಂಡ್​​ನ ಎಡಿನ್ಬರ್ಗ್ ಈಸ್ಟರ್ನ್ ಅನ್ನು ಪ್ರತಿನಿಧಿಸುವ ಆಲ್ಬಾ ಪಕ್ಷದ  ಸಂಸದೆ ಆ್ಯಶ್ ರೇಗನ್ ಎನ್ನುವವರು ಗೊತ್ತುವಳಿ ಮಂಡನೆ ಮಾಡಿದವರು. ದೇಶದಲ್ಲಿ ಹಿಂದೂಗಳಿಗೆ ತಾರತಮ್ಯತೆ, ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಅಂಶಗಳನ್ನು ಎತ್ತಿತೋರಿಸಿರುವ ವರದಿಯೊಂದನ್ನು ಬೆಂಬಲಿಸಿ ಈ ಗೊತ್ತುವಳಿ ಮಂಡಿಸಲಾಗಿದೆ. ಹಿಂದೂಗಳ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಈ ಕ್ರಮ ಅನುಸರಿಸಲಾಗಿದೆ. ಸ್ಕಾಟ್​​ಲ್ಯಾಂಡ್ ಸಂಸತ್ತಿನಲ್ಲಿ ಹಿಂದೂಫೋಬಿಯಾ ಬಗ್ಗೆ ನೇರವಾಗಿ ವಿಚಾರ ಪ್ರಸ್ತಾಪವಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಸ್ಕಾಟ್​​ಲ್ಯಾಂಡ್​​ನ ಗಾಂಧಿಯನ್ ಪೀಸ್ ಸೊಸೈಟಿ ಎನ್ನುವ ಚಾರಿಟಿ ಸಂಸ್ಥೆಯು ಹಿಂದೂಗಳ ವಿರುದ್ಧ ವಿವಿಧ ಸ್ತರಗಳಲ್ಲಿ ಇರುವ ತಾರತಮ್ಯತೆಗಳನ್ನು ಎತ್ತಿ ತೋರಿಸುವ ವರದಿಯೊಂದನ್ನು ಕಳೆದ ವಾರ ಬಿಡುಗಡೆ ಮಾಡಿತ್ತು. ‘ಸ್ಕಾಟ್​​ಲ್ಯಾಂಡ್​ನಲ್ಲಿ ಹಿಂದೂ ಸಮುದಾಯದ ವಿರುದ್ಧ ಪೂರ್ವಗ್ರಹ ಧೋರಣೆಯನ್ನು ತೋರಿಸುವ ಗಾಂಧಿಯನ್ ಪೀಸ್ ಸೊಸೈಟಿಯ ಕಾರ್ಯವನ್ನು ಸಂಸತ್ತು ಪ್ರಶಂಸಿಸುತ್ತದೆ,’ ಎಂದು ಆ್ಯಶ್ ರೇಗನ್ ತಮ್ಮ ಗೊತ್ತುವಳಿಯಲ್ಲಿ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article