ಧಾರವಾಡ: ತಡರಾತ್ರಿ ಮನೆಗೆ ಹೋಗುತ್ತಿದ್ದ ಸ್ಕೂಟಿಗೆ ಕಾರು ಟಚ್ ಆಯಿತೆಂದು ಗುಂಡು ಹಾರಿಸಿದ ಪ್ರಕರಣವೊಂದು ಧಾರವಾಡದ ಆರ್.ಎನ್.ಶೆಟ್ಟಿ ಮೈದಾನದ ಬಳಿ ಸಂಭವಿಸಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
ಸಂಗಮ ಸರ್ಕಲ್ನಲ್ಲಿ ಪೈನಾನ್ಸ್ ನಡೆಸುತ್ತಿರುವ ಅಭಿಷೇಕ ಬಡ್ಡಿಮನಿ ಎಂಬ ಯುವಕ ತನ್ನ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಕಾರು ಟಚ್ ಆಗಿದೆ ಎಂದುಕೊಂಡು ತನ್ನ ಬಳಿಯಿದ್ದ ರಿವಾಲ್ವರ್ನಿಂದ ಗುಂಡು ಹಾರಿಸಿ, ಭಯದಲ್ಲಿ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದನೆಂದು ಹೇಳಲಾಗಿದೆ.
ಕಾರಿನಲ್ಲಿ ಮೂವರಿದ್ದರೆಂಬ ಮಾಹಿತಿಯಿದ್ದು, ಅವರು ಸಿವಿಲ್ ಆಸ್ಪತ್ರೆಗೆ ಹೋಗಿ ಅಲ್ಲಿಂದ ಠಾಣೆಗೆ ಹೋಗಿದ್ದಾರೆಂದು ಗೊತ್ತಾಗಿದೆ. ಯಾವ ಕಾರಣಕ್ಕೆ ಅಭಿಷೇಕ ಬಡ್ಡಿಮನಿ ಗುಂಡು ಹಾರಿಸಿದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
ಪೈನಾನ್ಸ್ ವ್ಯವಹಾರ ಈ ಘಟನೆಗೆ ಕಾರಣವಾಗಿದೇಯಾ ಎಂಬುದನ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.