ಜಮಖಂಡಿ:- ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ತಾಲೂಕ ಮಟ್ಟದ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತುಂಗಳ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹುಲ್ಯಾಳ ಪ್ರಥಮ ಸ್ಥಾನ ಪಡೆದುಕೊಂಡಿದೆ.
ವಿಜ್ಞಾನ ನಾಟಕದಲ್ಲಿ ತುಂಗಳ ಆಂಗ್ಲ ಮಾಧ್ಯಮ ಶಾಲೆ ಹುಲ್ಯಾಳದಿಂದ ಎಲ್ಲರಿಗೂ ನೈರ್ಮಲ್ಯ ಎಂಬ ವಿಷಯದಡಿ ತನ್ವಿ ಮಾಳಿ,ಅಭಿನವ ಮೊಕಾಶಿ,ಪ್ರಜ್ಞಾ ಪಾಟೀಲ,ಪ್ರಗತಿ ಬಂಡಿ,ಸ್ವರ್ಣ ಗೌರಿ,ಕಾಳಪ್ಪ ಬಾದರದಿನ್ನಿ,ಶ್ರೀನಿವಾಸ ಶಿಂಧೆ ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿಚಾರಗೋಷ್ಠಿಯಲ್ಲಿ ತುಂಗಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮೃದ್ಧಿ ತೆಗ್ಗಿ ಪ್ರಥಮ ಸ್ಥಾನ ಪಡೆದಿದ್ದಾಳೆ.ತುಂಗಳ ಕನ್ನಡ ಮಾಧ್ಯಮದ ಕಾಶಿನಾಥ್ ಹಳದಿಕಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಸಂಸ್ಥಾಪಕ ಅಧ್ಯಕ್ಷ ಅಶೋಕ ತುಂಗಳ,ಡಾ ಲಕ್ಷ್ಮಿ ತುಂಗಳ ಶಾಲೆಯ ಮುಖ್ಯ ಗುರು ಡಿ.ಜಿ ವಾಲಿ,ಸಹ ಮುಖ್ಯ ಶಿವುಕಮಾರ ಕಾಟಾಪುರ, ತರಬೇತಿ ಶಿಕ್ಷಕರಾದ ಎನ್.ಜಿ.ಮುದವಿ,ಲಕ್ಷ್ಮಿ ಮುರಗೋಡ,ಜ್ಯೋತಿ ಮೋಹಿತೆ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.