ಕಾಗವಾಡ: ವಿಜ್ಞಾನ ನಿರಂತರ ಅಧ್ಯಯನ ನಾವೀನ್ಯತೆಗೆ ಅಡಿಪಾಯವಾಗಿದ್ದು, ಆ ಮೂಲಕ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಸದಾ ಸಿದ್ಧರಿರಬೇಕೆಂದು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತದಡಿಯಲ್ಲಿ ವಿಜ್ಞಾನ ವಿಭಾಗದ ವತಿಯಿಂದ ಬಿ.ಎಸ್ಸಿ-೧ ವರ್ಷಕ್ಕೆ ನೂತನವಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪರಿಚಯ ೨ಏ೨೫’ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಮೇಜರ್ ವಿ.ಎಸ್.ತುಗಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಪಿ.ತಳವಾರ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನದಿಂದ ಅಧ್ಯಯನ ನಡೆಸಬೇಕು, ಮತ್ತು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ.ಧಾಮಣ್ಣವರ ಮಹಾವಿದ್ಯಾಲಯದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಪ್ರೊ.ಜೆ.ಕೆ.ಪಾಟೀಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎ.ಇನಾಮದಾರ ಸ್ವಾಗತಿಸಿದರು. ಕು. ಸಂಧ್ಯಾ ಕುರಣೆ ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ವರ್ಗ ಶಿಕ್ಷಕಿ ಪ್ರೊ.ಎಸ್.ಡಿ.ಬಿರಾದಾರ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕೊನೆಯಲ್ಲಿ ಕು. ಪುಷ್ಪಾ ಟೆಕನೆ ವಂದಿಸಿದರು. ಕು. ಪ್ರಿಯಾ ಉಪ್ಪಾರ ಹಾಗೂ ಕು. ರಿಷೀಕೇಶ ಕಾಂಬಳೆ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.


