ಯರಗಟ್ಟಿ: ಪಟ್ಟಣದ ಪೃಥ್ವಿ ಸೇಂಟ್ರಲ್ ಸ್ಕೂಲ್ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಶಾಲೆಯಲ್ಲಿ ಮಕ್ಕಳ ಸಂಸತ್ ಚುನಾವಣೆ.
ಚುನಾವಣೆ ಅಂದರೆ ಶಾಲೆಗೆ ರಜೆಯೇನಿಲ್ಲ. ಇಲ್ಲಿ ಮಕ್ಕಳೇ ಸ್ಪರ್ಧಾಳುಗಳು, ಮಕ್ಕಳೇ ಮತ ಚಲಾಯಿಸುವವರು. ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶಾಲೆಯಲ್ಲಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಕಾತುರರಾಗಿದ್ದಾರೆ. ಇಡೀ ಶಾಲಾ ವಾತಾವರಣ ಚುನಾವಣಾ ಪ್ರಕ್ರಿಯೆಯಲ್ಲಿ ಮುಳುಗಿಹೋಗಿದೆ.
ಶಾಲೆಗೆ ಬಂದ ಕೆಲವು ಪಾಲಕರಿಗೆ ಒಂದು ರೀತಿಯ ಮೋಜು. ಕಲಿಕೆ ಹೀಗೂ ಇರುತ್ತದೆಯೇ? ಎಂಬ ಪ್ರಶ್ನೆ. ಒಟ್ಟಾರೆ ವಾತಾವರಣ ಚುನಾವಣೆಯಿಂದ ಚಂದಗೊಂಡಿದೆ.
ಇಂದಿನ ಮಕ್ಕಳೇ ಇಂದಿನ ನಾಯಕರು ಎಂದು ಹೇಳುವಾಗ ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಸಂಸತ್ ಎಂಬುದು ಮಕ್ಕಳ ಪ್ರಾತಿನಿಧಿಕ ರಚನೆಯಾಗಿದ್ದು, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಜವಬ್ದಾರಿ ನಿರ್ವಹಣೆಯ ಜೊತೆಗೆ ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ಭಾವೀ ನಾಗರಿಕರನ್ನು ಬೆಳೆಸಲು ಅನುಕೂಲವಾಗುತ್ತದೆ.
ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿ?ದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದು. ಶಾಲೆಗೆ ಸಂಬಂಧಿಸಿದ ಕೆಲ ಚಟುವಟಿಕೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಮಕ್ಕಳೂ ಕೂಡಾ ಅರ್ಹರು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆ ಹಾಗೂ ನಿರ್ಣಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಮಕ್ಕಳಿಗೆ ಇದೆ ಎಂದು ಮಾಜಿ ಜಿ. ಪಂ. ಸದಸ್ಯ ಅಜೀತ ಕುಮಾರ ದೇಸಾಯಿ ಹೇಳಿದರು.
ಶಾಲೆಗಳಲ್ಲಿ ನಡೆದ ಚುನಾವಣೆಗಳ ಅನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಗಳ ಹಂಚಿಕೆ ಮಾಡಿ ಆಯಾ ವ?ದ ಶಾಲಾ ಜವಾಬ್ದಾರಿ ವಹಿಸಲಾಗುತ್ತದೆ. ಪ್ರಧಾನ ಮಂತ್ರಿ, ಶಿಕ್ಷಣ ಮಂತ್ರಿ, ಸ್ವಚ್ಛತಾ ಮಂತ್ರಿ, ಗ್ರಂಥಾಲಯ ಪಾಲನೆ, ರಕ್ಷಣಾ ಮಂತ್ರಿ, ಆಹಾರ ಮಂತ್ರಿ ಹೀಗೆ ನಾನಾ ಖಾತೆಗಳನ್ನು ನೀಡಿ ಮಕ್ಕಳಿಗೆ ಜವಾಬ್ದಾರಿಯನ್ನು ನೀಡುವುದರಿಂದ ವ?ವಿಡೀ ಶಾಲೆಯ ನಿರ್ವಹಣೆ ಮಾಡಲು ಶಿಕ್ಷಕರಿಗೆ ಸುಲಭವೆನಿಸುತ್ತದೆ. ಶಿಕ್ಷಣ ಇಲಾಖೆಯ ಈ ತಂತ್ರದಿಂದ ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅನುಭವ ಸಿಗಲಿದೆ ಎಂದು ಮಾಜಿ ಸೈನಿಕ ಕುಮಾರ ಹಿರೇಮಠ ಹೇಳಿದರು.
ಈ ವೇಳೆ ಮಾಜಿ ಸೈನಿಕ ಫಕ್ಕೀರಪ್ಪ ಬಾಗಿಲದ, ಪ್ರಧಾನ ಗುರುಗಳಾದ ಬಸನಗೌಡ ಅಣ್ಣಿಗೇರಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕಳ್ಳಿಗುದ್ದಿ, ಶಾಲಾ ಸಿಬ್ಬಂದಿ ವರ್ಗದವರಾದ ಸವಿತಾ ದೇವರಡ್ಡಿ, ಕುಮಾರ ಬೋರಕ್ಕನ್ನವರ, ಕೃಷ್ಣಾ ಇಂಗಳೆ, ರುದ್ರಪ್ಪ ಘಸ್ತಿ, ಕಮಲಾ ಗಲಗಿ, ರೂಪಾ ಕತ್ತಿ, ಕಸ್ತೂರಿ ಪಾಟೀಲ, ಪ್ರೀಯಾಂಕಾ ರಾಯರ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಇದ್ದರು
ಮಕ್ಕಳ ಹಕ್ಕುಗಳಿಗೆ ಧ್ವನಿಯಾಗುವ ಶಾಲಾ ಸಂಸತ್
