ಶಾಲಾ ಪ್ರಾರಂಭೋತ್ಸವ ಕ್ರೀಡಾ ಚಟುವಟಿಕೆ ಸಾಂಸ್ಕೃತಿಕ ಉದ್ಘಾಟನಾ ಸಮಾರಂಭ

Ravi Talawar
ಶಾಲಾ ಪ್ರಾರಂಭೋತ್ಸವ ಕ್ರೀಡಾ ಚಟುವಟಿಕೆ ಸಾಂಸ್ಕೃತಿಕ ಉದ್ಘಾಟನಾ ಸಮಾರಂಭ
WhatsApp Group Join Now
Telegram Group Join Now

ಗದಗ ೨೯ : ಸ್ಪಂದನಾ ಕಿವುಡು ಮತ್ತು ಮೂಗ ಮಕ್ಕಳ ವಿಶೇಷ ಶಾಲೆಯಲ್ಲಿ ಶಾಲಾ ಪ್ರಾರಂಭೊತ್ಸವ ಹಾಗೂ ಕ್ರೀಡಾ ಚಟುವಟಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಹರ ವಲಯ ಆರ್. ಎಸ್. ಬುರಡಿಯವರು ಮಾತನಾಡಿ ಮಕ್ಕಳಿಗೆ ಮತ್ತು ಶಾಲೆಗೆ ಯಾವುದೇ ಸಹಾಯ ಕೇಳಿದರು ಮಾಡುತ್ತೇನೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣ ವಲಯ ಇವರು ಮಾತನಾಡಿ ಇಂತಹ ಮಕ್ಕಳಿಗೆ ದೇವರ ಮಕ್ಕಳು ಅವರ ವಿದ್ಯಾಭ್ಯಾಸಕ್ಕೆ ನಮ್ಮ ಸಹಾಯ ಸಹಕಾರ ಯಾವಾಗಲು ಇರುತ್ತದೆ ಎಂದು ತಿಳಿಸಿದರು. ಇನ್ನೋರ್ವ ಅತಿಥಿಯಾದ ನಿಂಗಪ್ಪ ಪೂಜೇರಿ ಪಿ.ಎಸ್. ಐ. ರಾಜೀವಗಾಂಧಿ ನಗರ ಪೊಲೀಸ್ ಠಾಣೆ ಇವರು ಮಾತನಾಡಿ ಇತರ ಮಕ್ಕಳಿಗಿಂತ ಕ್ರೀಯಾಶೀಲತೆ ಇರುವುದು ಸಮನ್ವಯತೆ ಇರುವುದು ಕಂಡು ಸಂತೋಷ ವ್ಯಕ್ತಪಡಿಸಿದರು.

ಮತ್ತೋರ್ವ ಅತಿಥಿ ಜಿ.ಎಚ್.ಪೂಜಾರ ಜಿಲ್ಲಾ ಕಾರ್ಯದರ್ಶಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಇವರು ಮಾತನಾಡಿ ಶಾಲಾ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್.ಎಫ್. ದ್ಯಾವನಗೌಡರ ವಹಿಸಿದ್ದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

WhatsApp Group Join Now
Telegram Group Join Now
Share This Article