ಬಳ್ಳಾರಿ, ಮೇ.28.: ಮಾನಸಿಕ ರೋಗಗಳಲ್ಲಿ ಸ್ಕಿಜೋಫೇರ್ನಿಯಾ ವಿಭಿನ್ನವಾದ ಖಾಯಿಲೆ ಯಾಗಿದ್ದು ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಡಾ ಭಾರತಿ ರವರು ತಿಳಿಸಿದರು,
ಅವರು ತಾಲೂಕಿನ ಮೋಕ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ಕಿಜೋಫೆನಿರ್ಯಾ ದಿನದ ಆಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರು ನೀರೆರೆಯುವ ಮೂಲಕ ಚಾಲನೆ ನೀಡಿ ಮಾನಾಡಿದರು.
ಅರವಳಿಕೆ ತಜ್ಞ ವೈದ್ಯರಾದ ಡಾ ನಿತೀಶ್ ಕುಮಾರ್ ಸ್ಕಿಜೋಜೋಪ್ರೆನಿಯ ಇದು ಮಾನಸಿಕ ಖಾಯಿಲೆ ಯಾಗಿದ್ದು ಮಲ್ಟಿ ಪರ್ಸನಾಲಿಟಿ ಡಿಸೋರ್ಡರ್ ಹಾಗೂ ಇದರ ರೋಗ ಲಕ್ಷಣಗಳ ಬಗ್ಗೆ ತಿಳಿಸಿದರು.
ಮಕ್ಕಳ ತಜ್ಞ ವೈದ್ಯರಾದ ಡಾ ರೂಪ ಮಾತನಾಡಿ ಸ್ಕಿಜೋಪ್ರೆನಿಯ ಖಾಯಿಲೆಯು ಸಾಮಾನ್ಯವಾಗಿ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ
ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಜೊತೆಗೆ ಕುಟುಂಬಸ್ಥರ ಸಾಕಾರದಿಂದ ಸಂಪೂರ್ಣವಾಗಿ ಗುಣ ಹೊಂದಬಹುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ದಂತ ವೈದ್ಯರಾದ ಡಾ ಅರ್ಜುಮುನ್ನಿಸಾ ಉಪಸ್ಥಿತರಿದ್ದರು,
ಕಾರ್ಯಕ್ರಮ ವನ್ನು ಮೋಕಾ ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿಗಳಾದ ಖುರ್ಶಿದ್ ಬೇಗಮ್ ನಡೆಸಿಕೊಟ್ಟರು,
ಕಾರ್ಯಕ್ರಮಾದಲ್ಲಿ ಕಛೇರಿ ಅಧೀಕ್ಷಕರಾದ ಸಂತೋಷ್ ಕುಮಾರ್ ಮತ್ತು ನರ್ಸಿಂಗ್ ಅಧಿಕಾರಿ ಎಂ ಉಷಾರಾಣಿ, ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ಬಸವರಾಜ್, ಸಮುದಾಯ ಅರೋಗ್ಯ ಅಧಿಕಾರಿ ತ್ರಿಪುನ್ ಕುಮಾರ್ ಮತ್ತು ಆಸ್ಪತ್ರೆ ವಿವಿಧ ವೃಂದ ಸಿಬ್ಬಂದಿ ಸೇರಿದಂತೆ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.