ಎಸ್‌ಸಿ, ಎಸ್‌ಟಿ ಸಚಿವರು, ಶಾಸಕರಿಗೆ ನಾಳೆ ಭರ್ಜರಿ ಔತಣಕೂಟ! ಡಿಕೆಶಿ, ಪರಮೇಶ್ವರ್‌ ಶಕ್ತಿ ಪ್ರದರ್ಶನ!

Ravi Talawar
ಎಸ್‌ಸಿ, ಎಸ್‌ಟಿ ಸಚಿವರು, ಶಾಸಕರಿಗೆ ನಾಳೆ ಭರ್ಜರಿ ಔತಣಕೂಟ! ಡಿಕೆಶಿ, ಪರಮೇಶ್ವರ್‌ ಶಕ್ತಿ ಪ್ರದರ್ಶನ!
WhatsApp Group Join Now
Telegram Group Join Now

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಜನವರಿ 2 ರಂದು ವಿದೇಶದಲ್ಲಿದ್ದಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಭಾಗವಹಿಸಿದ್ದರು.

ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಬುಧವಾರ ಹೋಟೆಲ್‌ನಲ್ಲಿ ಎಸ್‌ಸಿ/ಎಸ್‌ಟಿ ಶಾಸಕರಿಗೆ ಔತಣಕೂಟ ಏರ್ಪಡಿಸಲಿದ್ದಾರೆ. ಡಿ.ಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಎದುರಿಸಲು ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಶಾಸಕರು ಮತ್ತು ಎಂಎಲ್‌ಸಿಗಳು ‘ಮೆಗಾ ಪ್ಲಾನ್’ ಭಾಗವಾಗಿದ್ದಾರೆ ಎಂದು ಮೂಲವೊಂದು ಟಿಎನ್‌ಐಇಗೆ ತಿಳಿಸಿದೆ.

ಮಲೇಷ್ಯಾದಲ್ಲಿರುವ ಪರಮೇಶ್ವರ ಅವರು ಎಸ್‌ಸಿ ಸಮುದಾಯದ ಆಂತರಿಕ ಕೋಟಾ, ಎಸ್‌ಸಿ/ಎಸ್‌ಟಿ ಸಮುದಾಯಗಳ ಬೃಹತ್ ರ‍್ಯಾಲಿ ಸೇರಿದಂತೆ ನಾನಾ ವಿಷಯಗಳ ಚರ್ಚೆ ನೆಪದಲ್ಲಿ ಶಾಸಕರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಾಸ್ತವವಾಗಿ, ಜಾರಕಿಹೊಳಿ ಆಯೋಜಿಸಿದ್ದ ಔತಣಕೂಟದಲ್ಲಿ, ಶಿವಕುಮಾರ್ ಅವರನ್ನು ಎದುರಿಸುವ ಕಾರ್ಯತಂತ್ರದ ಭಾಗವಾಗಿ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಸ್‌ಸಿ/ಎಸ್‌ಟಿ ಶಾಸಕರಿಗೆ ಔತಣಕೂಟ ಏರ್ಪಡಿಸಲು ಸಿದ್ದರಾಮಯ್ಯ ಅವರು ಪರಮೇಶ್ವರ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಅವರಲ್ಲಿ ಎಷ್ಟು ಮಂದಿ ಔತಣಕೂಟಕ್ಕೆ ಹಾಜರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ 39,272 ಕೋಟಿ ರೂ ಇನ್ನೂ ಬಿಡುಗಡೆಯಾಗಬೇಕಿದೆ. ಎಸ್‌ಸಿಪಿ/ಟಿಎಸ್‌ಪಿ ನಿಧಿಯ ಬಗ್ಗೆ ಯಾರೋಬ್ಬರು ಧ್ವನಿ ಎತ್ತಿರಲಿಲ್ಲ, ಸಂಬಂಧಪಟ್ಟ ಮಂಡಳಿಗಳು ಮತ್ತು ನಿಗಮಗಳಿಗೆ ಕೇವಲ 600 ಕೋಟಿ ರೂ.ಗಳನ್ನು ನೀಡಲಾಗಿದ್ದು, ಅದರಲ್ಲಿ ಒಂದು ರೂಪಾಯಿಯೂ ಬಳಕೆಯಾಗುತ್ತಿಲ್ಲ ಹೀಗಾಗಿ ಸಭೆಯಲ್ಲಿ ಅವರನ್ನು ಪ್ರಶ್ನಿಸಲಿದ್ದೇವೆ ಎಂದು ಶಾಸಕರೊಬ್ಬರು ತಿಳಿಸಿದರು

WhatsApp Group Join Now
Telegram Group Join Now
Share This Article