ಕನ್ನಡ ಮಾತನಾಡಲು ಎಸ್‌ಬಿಐ ಮ್ಯಾನೇಜರ್‌ ನಿರಾಕರಣೆ: ಅಧಿಕಾರಿ ಟ್ರಾನ್ಸ್‌ಫರ್‌

Ravi Talawar
ಕನ್ನಡ ಮಾತನಾಡಲು ಎಸ್‌ಬಿಐ ಮ್ಯಾನೇಜರ್‌ ನಿರಾಕರಣೆ: ಅಧಿಕಾರಿ  ಟ್ರಾನ್ಸ್‌ಫರ್‌
WhatsApp Group Join Now
Telegram Group Join Now

ಬೆಂಗಳೂರು: ಎಸ್​ಬಿಐ ಬ್ರಾಂಚ್​​ ಮ್ಯಾನೇಜರ್​​​ ಕನ್ನಡ ಮಾತನಾಡಲು ನಿರಾಕರಿಸಿರುವುದು ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್​​​​ ಪೋಸ್ಟ್​ ಮಾಡಿರುವ ಅವರು, “ಆನೇಕಲ್​ನ ಸೂರ್ಯನಗರ ಮ್ಯಾನೇಜರ್​​ ನಡವಳಿಕೆ ಖಂಡನೀಯವಾಗಿದೆ. ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಎಸ್​ಬಿಐ ಕ್ರಮ ಮೆಚ್ಚುವಂತದ್ದಾಗಿದ್ದು, ಆ ಮೂಲಕ ಈ ವಿವಾದಕ್ಕೆ ತೆರೆಬಿದ್ದಿದೆ” ಎಂದಿದ್ದಾರೆ.

ಇಂಥ ಘಟನೆಗಳು ಮರುಕಳಿಸಬಾರದು: “ಆದರೆ, ಇಂಥ ಘಟನೆಗಳು ಮರುಕಳಿಸಬಾರದು. ಎಲ್ಲ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನವನ್ನು ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

“ಎಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆ, ಸಂಸ್ಕೃತಿ ಬಗ್ಗೆ ತರಬೇತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಜನರನ್ನು ಗೌರವಿಸಿದ ಹಾಗೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಆಗಿರುವುದೇನು?: ಆನೇಕಲ್​ ತಾಲೂಕಿನ ಚಂದಾಪುರದ ಸೂರ್ಯನಗರದಲ್ಲಿನ ಎಸ್​ಬಿಐ ಬ್ಯಾಂಕ್​​ ಮ್ಯಾನೇಜರ್​ ಚಳವಳಿಗಾರರೊಬ್ಬರಿಗೆ ಕನ್ನಡ ಮಾತನಾಡುವುದೇ ಇಲ್ಲ ಎಂದು ಪಟ್ಟು ಹಿಡಿದ ವಿಡಿಯೋ ವೈರಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

WhatsApp Group Join Now
Telegram Group Join Now
Share This Article