ಬಳ್ಳಾರಿ, ಮಾ.12.: ಜಿಲ್ಲೆ ದಲಿತ ಮಹಿಳಾ ಒಕ್ಕೂಟ(ಸ್ವಾಭಿಮಾನಿ ಪ್ರೊ ಬಿ. ಕೃಷ್ಣಪ್ಪ ಸ್ಥಾಪಿತ) ಒ ಸೋಮಶೇಖರ್ ಬಣ ಹಾಸನ ಸಂಘಟನೆ ವತಿಯಿಂದ ಸಾವಿತ್ರಿ ಬಾಯಿ ಪುಲೆರವರ 129 ನೆ ಪರಿನಿಬ್ಬಣವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾ ಸಂಚಾಲಕಿಯಾದ ಃ ಂ ಮಲ್ಲೇಶ್ವರಿ ಅವರು ಮಾತನಾಡುತ್ತಾ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟ ಅಪ್ರತಿಮ ಮಹಿಳೆ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆರವರು ಹೇಳಿದರು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಸಂಚಾಲಕರಾದ ರಾಮಣ್ಣ ಚೇಳ್ಳಗುರ್ಕಿ, ಅ ಮಹಮ್ಮದ್ ಅತಉಲ್ಲ ಮುಸ್ಲಿಂ ಮುಖಂಡರು, ಹಾಗೂ ಸುರೇಂದ್ರ ತಾಲ್ಲೂಕು ದಲಿತ ವಿದ್ಯಾರ್ಥಿ ಒಕ್ಕೂಟ ಡಿ ಜಿ ಸಾಗರ ಬಣ ಭಾಗವಹಿಸಿದರು. ಜಿಲ್ಲಾ ಮಹಿಳಾ ದಲಿತ ಪದಾಧಿಕಾರಿಗಳಾದ , ಪದ್ಮ, ಲಕ್ಷ್ಮೀದೇವಿ, ಈರಮ್ಮ, , ಎರ್ರಮ್ಮ, ಅಂಬಮ್ಮ, ರಮ್ಯಾ, ಅಂಪಮ್ಮ, ಗೌರಮ್ಮ, ಈಶ್ವರಮ್ಮ, ಶೋಭಾ, ಪವಿತ್ರ, ಗಿರಿಜಮ್ಮ, ಹಾಗೂ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿಯಾದ ಃ ಂ ಮಲ್ಲೇಶ್ವರಿ ಹಾಗೂ ಜಿಲ್ಲಾ ಸಂಚಾಲಕರಾದ ರಾಮಣ್ಣ ಚೇಳ್ಳಗುರ್ಕಿ ಅವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


