ಹಳ್ಳೂರ03. ಹೆಣ್ಣು ಮಕ್ಕಳಿಗೆ 19 ನೇ ಶತಮಾನದಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಶಿಕ್ಷಣ ನೀಡುತ್ತಿರಲಿಲ್ಲ ಮಹಿಳಾ ಹಕ್ಕುಗಗಳು ಅನಕ್ಷರತೆ ಅಸ್ಪೃಶ್ಯತೆ, ಸತಿ ಬಾಲ್ಯ ವಿವಾಹ, ಇತ್ಯಾದಿ ಅನಿಷ್ಟ ಪದ್ಧತಿಗಳ ಬಗ್ಗೆ ದಿಟ್ಟತನದಿಂದ ದ್ವನಿ ಎತ್ತಿ ಹೋರಾಡಿ ಶಿಕ್ಷಣ ನೀಡಿದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರು ಎಂದು ಶಿಕ್ಷಕಿ ಶಶಿಕಲಾ ಬಾಳೆಂಬಿಡ ಹೇಳಿದರು.
ಅವರು ಗ್ರಾಮದ ಸಾವಿತ್ರಿ ಬಾಯಿ ಫುಲೆ ಅವರ ವೃತ್ತದಲ್ಲಿ ಹಮ್ಮಿಕ್ಕೊಂಡ ಸಾವಿತ್ರಿ ಬಾಯಿ ಫುಲೆ ಅವರ 194 ನೇ ಜಯಂತ್ಯೋತ್ಸವ ಆಚರಣೆಲ್ಲಿ ಮಾತನಾಡುತ್ತಾ ಮಹಿಳೆಯರು ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟ ಮಹಾಮಾತೆ ಸಾವಿತ್ರಿ ಬಾಯಿ ಫುಲೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೊನಾ ಎಂದು ಹೇಳಿದರು.
ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಹಗಲಿರುಳು ಶ್ರಮಿಸಿ ಶಿಕ್ಷಣದ ಕ್ರಾಂತಿಯ ಹರಿಕಾರರಾಗಿ ಮಹಿಳೆಯರನ್ನು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟವರು ಶಿಕ್ಷಣ ಕಲಿಸಲು ದಾರಿಯಲ್ಲಿ ಹೊರಟಾಗ ಕೆಟ್ಟ ಜನ ಸಗಣೆ ಎರಚಿ ನಿಂದಿಸಿ ಅವಮಾನ ಮಾಡಿದರೂ ಹೆದರದೆ ಮುಚ್ಚು ಮರೆಯಿಲ್ಲದೆ ದಿಟ್ಟತನದಿಂದ ದ್ವನಿ ಎತ್ತಿ ಶಿಕ್ಷಣ ನೀಡಿ ಅಂಧಕಾರವನ್ನು ಕಳೆದು ಜ್ಞಾನದ ಬೆಳಕು ನೀಡಿದ ಸಾವಿತ್ರಿ ಬಾಯಿ ಫುಲೆ ಅವರ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ ಹಾಗೂ ಶಾಲೆಯ ಶಿಕ್ಷಕಿಯರು ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಪ್ರಧಾನ ಗುರುಗಳಾದ ಎಸ್ ಎಚ್ ವಾಸನ.ಭೀಮಶಿ ಮಗದುಮ.ಸಿದ್ಧಪ್ಪ ಕೂಲಿಗೋಡ.ಯಮನಪ್ಪ ನಿಡೋಣಿ.ಮಾದೇವ ಹೊಸಟ್ಟಿ.ಹನಮಂತ ಹಳ್ಳೂರ. ಅಯ್ಯಪ್ಪ ಹೀರೆಮಠ.ಲಕ್ಷ್ಮಣ ನಿಡೋಣಿ.ಭೀಮಪ್ಪ ಹೊಸಟ್ಟಿ. ತುಕಾರಾಮ ಸನದಿ. ಶಂಕರ ಕುಲಿಗೋಡ.ಬಸಪ್ಪ ಹಡಪದ.ಸುರೇಶ ಕತ್ತಿ.ಮಹಾವೀರ ಸಪ್ತಸಾಗರ.ಈರಪ್ಪ ರಾಮಧುರ್ಗ.ಶಂಕರಯ್ಯ ಹೀರೆಮಠ.ಈರಪ್ಪ ಕಮಲದಿನ್ನಿ.ಸೋಮು ಹೀರೆಮಠ. ಲಕ್ಷ್ಮಣ ಕೌಜಲಗಿ. ರಮೇಶ ಹೊಸೂರ. ಬಸಪ್ಪ ಅರಳಿಮಟ್ಟಿ.ದುಂಡಪ್ಪ ಕತ್ತಿ. ಬಾಳಗೌಡ ಪಾಟಿಲ.ಮಹಾಂತೇಶ ಲಿಗಾಡೆ.ದುಂಡಪ್ಪ ಹೊಸಟ್ಟಿ. ಸಂಗಪ್ಪ ಪಟ್ಟಣಶೆಟ್ಟಿ. ನಾರಾಯಣ ಪೂಜೇರಿ. ವಿಠ್ಠಲ ತೋಟಗಿ ಅಕ್ಬರ ಮುಜಾವರ. ಗೋಪಾಲ ಅಟಮಟ್ಟಿ. ಚರಣ ನಾಶಿ. ಬಸು ಹೊಸಮನಿ.ಕಿರಣ ಕಾಗೆ.ಸುರೇಶ ಗಂಟಿಚೋರ.ನರಸಪ್ಪ ಶೇಡಬಾಳ್ಕರ . ಯಲ್ಲಾಲಿಂಗ ಹೊಸಟ್ಟಿ ಸೇರಿದಂತೆ ಸಾವಿತ್ರಿ ಬಾಯಿ ಫುಲೆ ಮಹಿಳ ಮಂಡಳ ಸದಸ್ಯರು,ಗುರು ಹಿರಿಯರು, ಶಿಕ್ಷಕ,ಶಿಕ್ಷಕಿಯರು,ವಿದ್ಯಾರ್ಥಿಗಳಿದ್ದರು.